Site icon Vistara News

Operation Hasta: ಸಿಎಂ ಭೇಟಿಯಾದ ಎಸ್‌.ಟಿ.ಸೋಮಶೇಖರ್‌; ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ಆಯ್ತಾ?

ST Somashekar with CM Siddaramaiah

ST Somashekar with CM Siddaramaiah in bangalore

ಬೆಂಗಳೂರು: ಯಶವಂತಪುರ ಕ್ಷೇತ್ರ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆ ಅವರು ಭಾನುವಾರ ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿ ಮಾಡಿ ಮತುಕತೆ ನಡೆಸಿದ್ದಾರೆ. ಇದರಿಂದ ಬಿಜೆಪಿ ಮಾಜಿ ಸಚಿವ ಕಾಂಗ್ರೆಸ್‌ ಸೇರ್ಪಡೆಯಾಗುವುದು (Operation Hasta) ಖಚಿತವಾಯಿತಾ ಎಂಬ ಅನುಮಾನಗಳು ಮೂಡಿವೆ.

ಶಿವಾನಂದ ವೃತ್ತದ ಸಿಎಂ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಸೋಮಶೇಖರ್ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಬಿಜೆಪಿ ತೊರೆದು ಕೈ ಹಿಡಿಯಲು ತೆರೆಮರೆ ಸಿದ್ಧತೆ ನಡೆದಿರುವಾಗಲೇ ಕ್ಷೇತ್ರದ ಅಭಿವೃದ್ಧಿ ವಿಷಯದ ನೆಪದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಅವರು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಎಸ್‌.ಟಿ ಸೋಮಶೇಖರ್‌ ಅವರ ಕೆಲ ಬೆಂಬಲಿಗರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರು, ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಎಸ್. ಟಿ. ಸೋಮಶೇಖರ್ ಭೇಟಿಯಾಗಿದ್ದು, ಈ ವೇಳೆ ತಾವು ಕೂಡ ಕಾಂಗ್ರೆಸ್ ಸೇರ್ಪಡೆ ಆಗುವುದರ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Lok Sabha Election 2024: ಯಾರೂ ಬರದಿದ್ರೆ ಹೇಗೆ ಮೈತ್ರಿ ಮಾಡಿಕೊಳ್ಳೋದು: ಎಚ್‌.ಡಿ. ಕುಮಾರಸ್ವಾಮಿ

ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದೆ ಎಂದ ಎಸ್‌ಟಿಎಸ್

ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯಿಸಿ, ಸಿಎಂ ಅವರೊಂದಿಗೆ ಮಾತನಾಡಲು ಒಂದು ವಾರದಿಂದ ಅಪಾಯಿಂಟ್‌ಮೆಂಟ್‌ ಕೇಳಿದ್ದೆ. ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮಾತನಾಡಲು ಅನುಮತಿ ಕೇಳಿದ್ದೆ. ಇವತ್ತು ಬರಲು ಹೇಳಿದ್ದರು. ಕೆಂಗೇರಿ ಬ್ರಿಡ್ಜ್ ಬಗ್ಗೆ ಮಾತನಾಡಿದ್ದೇನೆ. ಕಾವೇರಿ ನೀರನ್ನ ವಾರಕ್ಕೆ ಮೂರು ದಿನ ಪೂರೈಕೆ ಮಾಡಲು ಅವಕಾಶ ಕೊಡಬೇಕು. ಕುಡಿಯೋ ನೀರಿಗೆ ಸಮಸ್ಯೆ ಇದೆ ಬಗೆಹರಿಸಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ನನ್ನ ಬೆಂಬಲಿಗರು ಕಾಂಗ್ರೆಸ್‌ ಸೇರುತ್ತಿಲ್ಲ

ಹೆಚ್ಚುವರಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಬಿಜೆಪಿಗೆ ನನ್ನ ಬೆಂಬಲಿಗರು ಹೋಗುತ್ತಿಲ್ಲ. ಕೆಲ ಕಾರ್ಪೋರೇಟರ್‌ಗಳು ಹಾಗೂ ಜೆಡಿಎಸ್‌ನವರು ಹೋಗುತ್ತಿದಾರೆ. ಯಾರು ಯಾರಿಗೆ ಕಾಂಗ್ರೆಸ್ ಸೇರಲು ಆಸೆ ಇದೆ ಅವರು ಹೋಗುತ್ತಾರೆ. ನನಗೆ ಬಿಜೆಪಿ ಮೇಲೆ ಅಸಮಧಾನ ಇಲ್ಲ, ಕ್ಷೇತ್ರದ ವಿಚಾರವಾಗಿ ಅಸಮಧಾನ ಇದೆ. ಈಗಾಗಲೇ ಸಿಟಿ ರವಿ, ಆರ್. ಅಶೋಕ್ ಮಾತನಾಡಿ ಸರಿಪಡಿಸಿದ್ದಾರೆ. ನಾನು ಪಕ್ಷಕ್ಕೆ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಕೂಡ ಅದೇ ವಾತಾವರಣ ಇರುವಂತೆ ನೋಡಿಕೊಳ್ಳಿ ಎಂದು ಹಿರಿಯ ನಾಯಕರಿಗೆ ಹೇಳಿದ್ದೇನೆ. ಸರಿಪಡಿಸುತ್ತೇವೆ ಅಂತ ಪಕ್ಷದ ಮುಖಂಡರು ಹೇಳಿರುವುದಾಗಿ ತಿಳಿಸಿದರು.

ಸಿದ್ದರಾಮಯ್ಯ ನನಗೇನೂ ಹೇಳಿಲ್ಲ

ನಾನು ಯಾರನ್ನೂ ಸಸ್ಪೆಂಡ್ ಮಾಡಿ ಎಂದು ಹೇಳಿಲ್ಲ. ಪಕ್ಷ ವಿರೊಧಿ ಚಟುವಟಿಕೆ ಮಾಡಿದರೆ ಅಂತಹವರಿಗೆ ಎಚ್ಚರಿಕೆ ನೀಡಿ ಎಂದು ಹಿರಿಯ ನಾಯಕರಿಗೆ ಹೇಳಿದ್ದೆ. ನನಗೆ ಅದೃಷ್ಟ ಇತ್ತು ಗೆದ್ದೆ, ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತೋ? ಮುಂದಿನ ಬಿಬಿಎಂಪಿ ಸೇರಿ ವಿವಿಧ ಚುನಾವಣೆಯೊಳೆಗೆ ಎಲ್ಲ ಸರಿಪಡಿಸಲು ಹೇಳಿದ್ದೇನೆ. ನನಗೆ ಅಸಮಧಾನ ಇದೆ, ನಾನು ಕೊಟ್ಟಿರುವ ದೂರಿಗೆ ದಾಖಲೆ ಒದಗಿಸಿದ್ದೇನೆ. ಅದರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Power Point with HPK : ಶಾಸಕರಿಗೆ ಹೆಚ್ಚಿನ ಅನುದಾನ ಬೇಕಿದ್ದರೆ ಮುಂದಿನ ಬಜೆಟ್‌ವರೆಗೆ ಕಾಯಬೇಕೆಂದ ಜಾರ್ಜ್!

ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೇನೂ ಹೇಳಿಲ್ಲ. ನನ್ನ ಕ್ಷೇತ್ರಕ್ಕೆ ಬಂದಾಗಲೇ ಒಂದಷ್ಟು ಸಮಸ್ಯೆ ಬಗ್ಗೆ ಹೇಳಿದ್ದರು. ಸಿಎಂ ಕಚೇರಿ ಜತೆ ಸಂಪರ್ಕದಲ್ಲಿರಲು ಹೇಳಿದ್ದರು. ಅದರಂತೆ ಇವತ್ತು ಭೇಟಿಯಾಗಲು ಹೇಳಿದ್ದರು. ಹೀಗಾಗಿ ಬಂದು ಮನವ ಪತ್ರ ಕೊಟ್ಟಿದ್ದೇನೆ. ನಾಳೆ ಸಮಸ್ಯೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಾರೆ.

Exit mobile version