Site icon Vistara News

Chikkaballapur News: ವಿಶ್ವೇಶ್ವರಯ್ಯ ಮಾದರಿಯಲ್ಲಿ ಸುಧಾಕರ್‌ ಕೆಲಸ; ಅವರು ಹೇಳಿದಂತೆ ಸಿಎಂ ಕೇಳುತ್ತಾರೆ: ಎಸ್‌.ಟಿ. ಸೋಮಶೇಖರ್‌

ST Somashekar says Sudhakar is working on Sir M Visvesvaraya model

#image_title

ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ (Chikkaballapur News) ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಹಾಡಿ ಹೊಗಳಿದ್ದಾರೆ. ಒಬ್ಬರು ಡಾ.ಕೆ.ಸುಧಾಕರ್‌ ಅವರನ್ನು ಸರ್.ಎಂ.ವಿಶ್ವೇಶ್ವರಯ್ಯ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರೆ, ಮತ್ತೊಬ್ಬರು ಮುಖ್ಯಮಂತ್ರಿ ಆಗಲು ಸುಧಾಕರ್‌ ಅರ್ಹರು ಎಂದು ಕೊಂಡಾಡಿದ್ದಾರೆ.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ 14 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ಚಿಕ್ಕಬಳ್ಳಾಪುರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಮಾದರಿಯಲ್ಲಿ ಸಚಿವ ಸುಧಾಕರ್ ಕೆಲಸ ಮಾಡುತ್ತಿದ್ದಾರೆ. ಆಗಿನ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ರೀತಿ ಸಿಎಂ ಬೊಮ್ಮಾಯಿ ಸಹ ಸುಧಾಕರ್ ಮಾತನ್ನು ಕೇಳುತ್ತಿದ್ದಾರೆ. ಬೊಮ್ಮಾಯಿಗೂ ಅದೇನು ಮರುಳು ಮಾಡಿದ್ದಾರೋ ಗೊತ್ತಿಲ್ಲ. ಸುಧಾಕರ್ ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತಾರೆ ಎಂದು ಹೇಳಿದರು.

ಸಿ‌ಎಂ ಬೊಮ್ಮಾಯಿ ಅವರನ್ನು‌ ಸುಧಾಕರ್‌ ಯಾವಾಗ ಭೇಟಿ ಮಾಡುತ್ತಾರೋ ಗೊತ್ತಿಲ್ಲ. ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತಾರೆ. ನಾನು ಹಾಗೂ ಸುಧಾಕರ್ ಉತ್ತಮ ಸ್ನೇಹಿತರು, ವಲಸೆ ಹಕ್ಕಿಗಳು. ಇಬ್ಬರು ಪರಸ್ಪರ ಸಹಕಾರದಿಂದ ಅಭಿವೃದ್ಧಿಯಲ್ಲಿ ತೊಡಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Border Dispute: ರಾಜ್ಯದ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ: ಸಿಎಂ ರಾಜೀನಾಮೆಗೆ ಡಿ.ಕೆ. ಶಿವಕುಮಾರ್ ಆಗ್ರಹ

ಒಕ್ಕಲಿಗರಲ್ಲಿ ಸಿಎಂ ಆಗುವ ಅರ್ಹತೆ ಸುಧಾಕರ್‌ಗೆ ಇದೆ

ಒಕ್ಕಲಿಗರಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಡಾ.‌ಕೆ. ಸುಧಾಕರ್‌ಗೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ನಾಯಕ ಸುಧಾಕರ್ ಆಗಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಹೇಳಿದ್ದಾರೆ.

Exit mobile version