ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ನಡೆಯಬೇಕಿದ್ದ ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರೂಕಿ (Munawar Faruqui) ಅವರ ಶೋ ಮತ್ತೆ ರದ್ದಾಗಿದೆ. ಕಾಮಿಡಿ ಶೋ ಆಯೋಜಕರು ಸಮರ್ಪಕವಾಗಿ ಅನುಮತಿ ಪಡೆಯದ ಕಾರಣ ಬೆಂಗಳೂರು ಪೊಲೀಸರು ಶೋ ರದ್ದುಗೊಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಮುನಾವರ್ ಫಾರೂಕಿಯು ಶೋನಲ್ಲಿ ಭಾಗವಹಿಸದಿರುವಂತೆ ಬಿಜೆಪಿಯ ಕೆಲ ಮುಖಂಡರು ಎಚ್ಚರಿಕೆ ನೀಡಿದ್ದರು. ಅಲ್ಲದೆ, ಫಾರೂಕಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು. ಆದಾಗ್ಯೂ, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಲ್ಲದೆ, ಕೆಲ ಮುಖಂಡರನ್ನು ವಶಕ್ಕೂ ಪಡೆದಿದ್ದರು. ಹಾಗಾಗಿ, ಬೆಂಗಳೂರಿನಲ್ಲಿ ಅನುಮತಿ ಪಡೆಯದ ಕಾರಣ ಶೋ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷವೂ ಮುನಾವರ್ ಫಾರೂಕಿ ಶೋ ರದ್ದುಗೊಳಿಸಲಾಗಿತ್ತು.
ಮುನಾವರ್ ಫಾರೂಕಿ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವಿದೆ. ವರ್ಷದ ಆರಂಭದಲ್ಲಿ ಫಾರೂಕಿ ಅವರು ಮಧ್ಯಪ್ರದೇಶದಲ್ಲಿ ನಡೆಸಿದ ಶೋ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಇದಾದ ಬಳಿಕ ಮುನಾವರ್ ಫಾರೂಕಿ ಭಾಗವಹಿಸಬೇಕಿದ್ದ ಸುಮಾರು ೧೨ ಶೋಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ | ಶೋ ರದ್ದಾಗಿದೆ : ಖಾಲಿ ಹೊಡೆಯುತ್ತಿರುವುದೇಕೆ ಥಿಯೇಟರ್‌ಗಳು?