Site icon Vistara News

Mining StartUp Summit: ಮೈನಿಂಗ್ ಕ್ಷೇತ್ರದ ಸ್ಟಾರ್ಟಪ್‌ಗಳಿಗೆ ಉತ್ತಮ ಅವಕಾಶ: ಪ್ರಲ್ಹಾದ್ ಜೋಶಿ

Pralhad Joshi in IIT bombay

#image_title

ಮುಂಬಯಿ: ಭಾರತದ ಕಲ್ಲಿದ್ದಲು ಹಾಗೂ ಮೈನಿಂಗ್ ಕ್ಷೇತ್ರ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ. ಹೀಗಾಗಿ ದೇಶದಲ್ಲಿ ಮೈನಿಂಗ್ ಕ್ಷೇತ್ರದ ಸ್ಟಾರ್ಟಪ್‌ಗಳಿಗೆ (Mining StartUp Summit) ಉತ್ತಮ ಅವಕಾಶವಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.‌

ಐಐಟಿ ಬಾಂಬೆಯಲ್ಲಿ ಸೋಮವಾರ ಆಯೋಜಿಸಿದ್ದ ಮೊದಲ ಮೈನಿಂಗ್ ಸ್ಟಾರ್ಟಪ್ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಸುಭದ್ರ ಹಾಗೂ ದಕ್ಷ ಸರ್ಕಾರವಿದ್ದಾಗ ಮಾತ್ರ ಈ ರೀತಿಯ ಪ್ರಗತಿ ಕಾಣಲು ಸಾಧ್ಯ. ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಖನಿಜ ಗಣಿಗಾರಿಕೆ ಕ್ಷೇತ್ರವು ಬಹುತೇಕ ಎಲ್ಲ ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ | New Parliament Building : ಹೊಸ 75 ರೂ. ನಾಣ್ಯವನ್ನು ನೀವು ಹೇಗೆ ಪಡೆಯಬಹುದು? ಇಲ್ಲಿದೆ ಡಿಟೇಲ್ಸ್

Pralhad Joshi talks in IIT Bombay about mining

ಕೇಂದ್ರ ಸರ್ಕಾರದ ಗಣಿ ಇಲಾಖೆ ನಿರಂತರವಾಗಿ ಭೂವೈಜ್ಞಾನಿಕ ಪರಿಶೋಧನೆ ಕೈಗೊಳ್ಳುತ್ತಿದ್ದು, ಈ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಪ್ರಸ್ತುತ 4.5 ಲಕ್ಷ ಚದರ ಕಿ.ಲೋ ಮೀಟರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 2 ಲಕ್ಷ ಚದರ ಕಿ.ಲೋ ಮೀಟರ್‌ಗೆ ಪ್ರದೇಶವನ್ನು ಪರಿಶೋಧನೆಗಳ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು.

ಕಳೆದ 9 ವರ್ಷಗಳ ಹಿಂದೆ ಇದ್ದ ಸರ್ಕಾರಗಳು ಭಾರತದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದರಲ್ಲೇ ನಿರತವಾಗಿದ್ದವು. 800 ಮಿಲಿಯನ್ ಟನ್ನಷ್ಟು ಬೇಡಿಕೆ ಇರುವ ಸಂದರ್ಭದಲ್ಲಿ ಭಾರತದಲ್ಲಿ ಕೇವಲ 500 ಮಿಲಿಯನ್ ಟನ್ ಕಲ್ಲಿದ್ದಲು ಮಾತ್ರ ಉತ್ಪಾದಿಸಲಾಗುತ್ತಿತ್ತು. ಪ್ರಪಂಚದಲ್ಲೇ ಅತಿ ಹೆಚ್ವು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ನಾಲ್ಕನೇ ದೇಶ ಭಾರತ. ಆದರೆ ನಮ್ಮ ದೇಶದಲ್ಲಿ ಈಗಲೂ ಕಲ್ಲಿದ್ದಲು ಆಮದು ಆಗುತ್ತಿದೆ ಎಂಬುವುದು ವಿಪರ್ಯಾಸ ಎಂದು ಹೇಳಿದರು.

ಇದನ್ನೂ ಓದಿ | ಬಂಗಾಳದಲ್ಲಿ ಕಾಂಗ್ರೆಸ್‌ಗೆ ಆಘಾತ; ಪಕ್ಷದ ಏಕೈಕ ಶಾಸಕ ಬೈರೋನ್‌ ವಿಶ್ವಾಸ್ ಟಿಎಂಸಿ ಸೇರ್ಪಡೆ

ಬಿಜೆಪಿ ಸರ್ಕಾರ ಬಂದ ಬಳಿಕ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಕಲ್ಲಿದ್ದಲು ಉತ್ಪಾದನೆಗೆ ವೇಗ ನೀಡಲಾಗಿದೆ. ಸುಮಾರು 850 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಈ ಸಾಲಿನ ಅಂತ್ಯದ ವೇಳೆಗೆ ನಾವು ತಲುಪಲಿದ್ದೇವೆ. 2024-25 ರಲ್ಲಿ ಒಂದು ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸಲಾಗುವುದು. 2025-26 ರಲ್ಲಿ ಭಾರತ ಉಷ್ಣ ವಿದ್ಯುತ್ ಬಳಕೆಗೆ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

Exit mobile version