Site icon Vistara News

ರಾಜ್ಯ ಜಲ ನೀತಿ-2022ಕ್ಕೆ ಸಚಿವ ಸಂಪುಟದ ಒಪ್ಪಿಗೆ; ಜಲ ಸಂಪನ್ಮೂಲ ನಿರ್ವಹಣೆಗೆ ಪ್ರಾಧಿಕಾರ ರಚನೆ

Vidhana soudha

ಬೆಂಗಳೂರು: ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಲ ನೀತಿ-2022ಕ್ಕೆ ಅನುಮೋದನೆ ನೀಡಲಾಗಿದ್ದು, ಜಲ ಸಂಪನ್ಮೂಲ ನಿರ್ವಹಣೆಯನ್ನು ಸಮರ್ಪಕವಾಗಿ ಬಲಪಡಿಸಲು ಅಂತರ್-ವಿಭಾಗೀಯ ರಾಜ್ಯ ಜಲಸಂಪನ್ಮೂಲ ಪ್ರಾಧಿಕಾರ ರಚಿಸಲು ಹೊಸ ಜಲ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

2022ರ ಏ. 27ರಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಡು ರಾಜ್ಯ ಜಲ ನೀತಿಯನ್ನು ರೂಪಿಸಲಾಗಿತ್ತು. ಇದನ್ನು ಸಂಪುಟ ಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹೊಸ ಜಲನೀತಿಯಲ್ಲಿ ಯಾವ ಯಾವ ಅಂಶಗಳು ಇವೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ | Karnataka Police | ರಾಜ್ಯದ 6 ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರದ ಗೃಹ ಸಚಿವರ ಶ್ರೇಷ್ಠತಾ ಪ್ರಶಸ್ತಿ

ವಿಜಯಪುರ ಜಿಲ್ಲೆಗೆ ಬೃಹತ್ ಕುಡಿಯುವ ನೀರಿನ ಯೊಜನೆ : ಗೋವಿಂದ ಕಾರಜೋಳ
ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್‌ ಇಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಅಸಿಸ್ಟನ್ಸ್(NIDA) ನೆರವಿನಿಂದ ವಿಜಯಪುರ ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲೂಕು ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-೧) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ NIDA ಅಡಿಯಲ್ಲಿ ನಬಾರ್ಡ್‌ನಿಂದ ಪಡೆದ ಸಾಲದಡಿ ಹಾಗೂ ಯುಡಿಡಿಯಿಂದ ಅನುದಾನದ ನೆರವಿನೊಂದಿಗೆ ಸಂಯೋಜಿತಗೊಳಿಸಿದ ಪರಿಷ್ಕೃತ ಅಂದಾಜು ಮೊತ್ತ ೨೦೭೭.೬೩ ಕೋಟಿ ರೂಪಾಯಿ ಮಂಜೂರಿಗೆ ಸಚಿವ ಸಂಪುಟದ ಅನುಮೋದನೆ ದೊರತಿದೆ.

ಇದನ್ನೂ ಓದಿ | Freedom March | ಆ.15ರ ‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆಗೆ ಕಾಂಗ್ರೆಸ್‌ ಸಜ್ಜು: ಡಾ.ಜಿ.ಪರಮೇಶ್ವರ್‌

Exit mobile version