ಬೆಂಗಳೂರು: ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada and Culture Dept) ಮೂಲಕ ಆಚರಿಸುವ 31 ಜಯಂತಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಮಾಜ ಸುಧಾರಕರು, ವಚನಕಾರರು, ಧಾರ್ಮಿಕ ಪುರುಷರು, ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ವ್ಯಕ್ತಿಗಳ 31 ಜಯಂತಿಗಳನ್ನು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲು ಅನುದಾನ ನಿಗದಿ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಮಹಾವೀರ ಜಯಂತಿ, ಅಕ್ಕಮಹಾದೇವಿ ಜಯಂತಿ, ಬಸವ ಜಯಂತಿ, ಶಂಕರಾಚಾರ್ಯ ಜಯಂತಿ ಸೇರಿ 31 ಜಯಂತಿಗಳನ್ನು ರಾಜ್ಯಮಟ್ಟದ ಜಯಂತಿ ಆಚರಿಸಲು ಜಿಲ್ಲಾಧಿಕಾರಿಗಳಿಗೆ 5 ಲಕ್ಷ ರೂಪಾಯಿ, ಜಿಲ್ಲಾ ಮಟ್ಟದ ಜಯಂತಿಗೆ 50 ಸಾವಿರ ರೂಪಾಯಿ, ತಾಲೂಕು ಮಟ್ಟದ ಜಯಂತಿಗೆ 20 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ರಾಜ್ಯ ಮಟ್ಟದ ಜಯಂತಿ ಆಚರಿಸಲಾಗುತ್ತದೆ.
ಟಿಪ್ಪು ಜಯಂತಿ ಆಚರಣೆ ಇಲ್ಲ ಏಕೆ?
ಟಿಪ್ಪು ಜಯಂತಿಯನ್ನು ಮೊದಲಿಗೆ 2014ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆ ಮಾಡಲಾಯಿತು. ಇದು ವಿವಾದವಾದ ನಂತರ 2015 ರಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಯಿತು. ಸಿದ್ದರಾಮಯ್ಯ ಸರ್ಕಾರ ಇರುವವರೆಗೂ ಅಲ್ಲಿಂದಲೇ ಆಚರಣೆ ಆಯಿತು. ಆದರೆ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿತ್ತು. ಒಂದು ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮತ್ತೆ ಟಿಪ್ಪು ಜಯಂತಿ ಆಚರಿಸಬೇಕಿದ್ದರೆ ರಾಜ್ಯ ಸರ್ಕಾರದಿಂದ ಹೊಸ ಆದೇಶ ಮಾಡಬೇಕಾಗುತ್ತದೆ. ಹೀಗಾಗಿ 2013-24ಣೇ ಸಾಲಿನ 31 ಜಯಂತಿಗಳ ವೇಳಾಪಟ್ಟಿಯಲ್ಲಿ ಟಿಪ್ಪು ಜಯಂತಿ ಇಲ್ಲ.
ಇದನ್ನೂ ಓದಿ | Karnataka CM: ಹೆಚ್ಚು ಲಿಂಗಾಯತ ಶಾಸಕರಿರುವ ಕಾಂಗ್ರೆಸ್‌ನಲ್ಲಿ ಡಿಸಿಎಂ ಸ್ಥಾನಕ್ಕಾದರೂ ಒತ್ತಡ ಹಾಕಬೇಕಿತ್ತು: ವಿಜಯೇಂದ್ರ