ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಐಎಎಸ್ ಅಧಿಕಾರಿಗಳ ಭಾರಿ ವರ್ಗಾವಣೆಯನ್ನು (IAS Transfer) ಮಾಡಿದೆ. 10 ಮಂದಿ ಐಎಎಸ್ ಅಧಿಕಾರಿಗಳನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (Dept. of personnel and administrative reforms) ಅಧೀನ ಕಾರ್ಯದರ್ಶಿಯಾಗಿರುವ ಜೇಮ್ಸ್ ತಾರಕನ್ ಅವರು ಸಹಿ ಹಾಕಿರುವ ಆದೇಶದಲ್ಲಿ ಈ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಹುದ್ದೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿದೆ.
ಐಎಎಸ್ ಅಧಿಕಾರಿಗಳಾದ ಪಲ್ಲವಿ ಅಕುರಥಿ, ಡಾ. ವೆಂಕಟೇಶ್ ಎಂ, ರವೀಂದ್ರ ಪಿ.ಎನ್, ಶ್ರೀನಿವಾಸ್ ಕೆ, ಜಾನಕಿ ಕೆ.ಎಂ., ಮುಲ್ಲೈ ಮುಹಿಲನ್ ಎ.ಪಿ., ಯೋಗೇಶ್ ಎ.ಎಂ., ಡಾ. ಕುಮಾರ, ಪ್ರಭು ಜಿ ಮತ್ತು ನವೀನ್ ಕುಮಾರ್ ರಾಜು ವರ್ಗಾವಣೆಗೊಂಡ ಪ್ರಮುಖ ಅಧಿಕಾರಿಗಳು.
ಯಾವ ಅಧಿಕಾರಿ? ಎಲ್ಲಿಂದ ಎಲ್ಲಿಗೆ ವರ್ಗ?
- ಹಣಕಾಸು ನೀತಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾಗಿದ್ದ ಪಲ್ಲವಿ ಅಕುರಥಿ ಅವರನ್ನು ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ನಿರ್ದೇಶಕರಾಗಿ ಮುಂದಿನ ಆದೇಶದವರೆಗೂ ವರ್ಗಾವಣೆ ಮಾಡಲಾಗಿದೆ.
- ಇದುವರೆಗೆ ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ನಿರ್ದೇಶಕರಾಗಿದ್ದ ಜಾನಕಿ ಕೆ. ಎಂ. ಅವರನ್ನು ಬಾಗಲಕೋಟೆಯ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
- ಬೆಂಗಳೂರಿನ ಜಲಾನಯನ ಅಭಿವೃದ್ಧಿ ಇಲಾಖೆಯ ಕಮಿಷನರ್ ಆಗಿದ್ದ ಡಾ. ವೆಂಕಟೇಶ್ ಎಂ.ವಿ. ಅವರನ್ನು ಬೆಂಗಳೂರಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಯೋಜನೆ)ರಾಗಿದ್ದ ರವೀಂದ್ರ ಪಿ.ಎನ್. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ ನೇಮಿಸಲಾಗಿದೆ.
- ಬೆಂಗಳೂರಿನ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀನಿವಾಸ್ ಕೆ. ಅವರನ್ನು ತುಮಕೂರು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿ ವರ್ಗ ಮಾಡಲಾಗಿದೆ.
- ಸ್ಮಾರ್ಟ್ ಆಡಳಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಮುಲ್ಲೈ ಮುಹಿಲಾನ್ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.
- ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಟ್ರಾನ್ಸ್‌ಫರ್ ಮಾಡಲಾಗಿದೆ.
- ಬೆಂಗಳೂರಿನ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿದ್ದ ಯೋಗೇಶ್ ಎ.ಎಂ. ಅವರನ್ನು ಬೆಂಗಳೂರಿನ ರಸ್ತೆ ಮತ್ತು ಸಾರಿಗೆ ಸುರಕ್ಷತಾ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
- ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಪ್ರಭು ಜಿ. ಅವರನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.
- ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದ ನವೀನ್ ಕುಮಾರ್ ರಾಜು ಎಸ್. ಅವರನ್ನು ಕರ್ನಾಟಕ ವಸತಿ ಸಂಸ್ಥೆಗಳ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: Karnataka Politics : ಅಕ್ಕಿ ಕೊಡದ ಕೇಂದ್ರದ ವಿರುದ್ಧ ಜೂ. 20ರಂದು ಕಾಂಗ್ರೆಸ್ ಉಗ್ರ ಹೋರಾಟ