ಬೆಂಗಳೂರು: ರಾಜ್ಯ ಸರ್ಕಾರವು ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ “ಉತ್ತಮ ಶಿಕ್ಷಕ” ಪ್ರಶಸ್ತಿ ಘೋಷಿಸಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ೨೦ ಶಿಕ್ಷಕರಿಗೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ೧೧ ಶಿಕ್ಷಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಹಾಗೆಯೇ, ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿಯರಿಗೆ ಶಿಕ್ಷಣ ಸುಧಾರಕಿ “ಸಾವಿತ್ರಿಬಾಯಿ ಫುಲೆ” ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಹೀಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗ
- ಮಂಜುನಾಥ್ ಶಂಕ್ರಪ್ಪ – ಸ.ಹಿ.ಪ್ರಾ. ಶಾಲೆ ಬೆನ್ನೂರ್, ಧಾರವಾಡ
- ಅಮಿತಾನಂದ ಹೆಗಡೆ – ಸ.ಹಿ.ಪ್ರಾ. ಶಾಲೆ ಬಂಗಾಡಿ, ಬೆಳ್ತಂಗಡಿ
- ಚಂದ್ರಶೇಖರ್ HL – ಸ.ಹಿ.ಪ್ರಾ. ಶಾಲೆ ರಾಗಿಮಾಕಲ, ಚಿಕ್ಕಬಳ್ಳಾಪುರ
- ಅಪ್ಪಾ ಸಾಹೇಬ್ ವಸಂತಪ್ಪ ಗಿರಿವಣ್ಣನರ – ಸ.ಹಿ.ಪ್ರಾ. ಶಾಲೆ ತುಕ್ಕಾನಟ್ಟಿ, ಚಿಕ್ಕೋಡಿ
- ಶಿವಾನಂದಪ್ಪ ಬಿ – ಸ.ಹಿ.ಪ್ರಾ. ಶಾಲೆ ಹರಗುವಳ್ಳಿ, ಶಿವಮೊಗ್ಗ
- ಹುಸೇನ್ ಸಾಬ್ – ಸ.ಮಾ.ಹಿ.ಪ್ರಾ. ಶಾಲೆ ಬಸನಾಳ, ಕಲಬುರಗಿ
- ಸುದರ್ಶನ್ ಕೆವಿ – ಕನ್ನಡ ಮತ್ತು ತಮಿಳು ಸ.ಮಾ.ಪ್ರಾ. ಶಾಲೆ, ಬೆಂಗಳೂರು
- ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಬಾಲಕರ ಕನ್ನಡ ಸ.ಹಿ.ಪ್ರಾ. ಶಾಲೆ ಹಂದಿಗನೂರು, ಹಾವೇರಿ
- ಸಂಜೀವ ದೇವಾಡಿಗ – ಸ.ಕಿ.ಪ್ರಾ. ಶಾಲೆ ಮಿಯೂರು, ಕಾರ್ಕಳ
- ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ – ಸ.ಹಿ.ಪ್ರಾ. ಶಾಲೆ ತೊದಲಬಾಗಿ, ಬಾಗಲಕೋಟೆ
- ಚಂದ್ರಕಲಾ – ಸ.ಹಿ.ಪ್ರಾ. ಶಾಲೆ ಹಾಲಭಾವಿ, ಯಾದಗಿರಿ
- ನಿರಂಜನ ಪಿಜೆ – ಸ.ಹಿ.ಪ್ರಾ. ಶಾಲೆ ವೆಂಕಟಾಪುರ, ಹೊಸಪೇಟೆ
- ಸುಶೀಲಬಾಯಿ ಲಕ್ಷ್ಮೀಕಾಂತ್ ಗುರುವ – ಸ.ಹಿ.ಪ್ರಾ. ಶಾಲೆ ವಡಗಾವಿ, ಬೆಳಗಾವಿ
- ವಿದ್ಯಾ ಕಂಪಾಪೂರ ಮಠ – ಸ.ಹಿ.ಪ್ರಾ. ಶಾಲೆ ನೆರೆಬೆಂಚಿ, ಕೊಪ್ಪಳ
- ಬಸವರಾಜ ಜಾಡರ – ಸ.ಹಿ.ಪ್ರಾ. ಶಾಲೆ ಮುಳ್ಳೂರು, ರಾಯಚೂರು
- ಗಂಗಾಧರಪ್ಪ ಬಿಆರ್ – ಸ.ಮಾ.ಹಿ.ಪ್ರಾ. ಶಾಲೆ ಮೆಣಸೆ, ಚಿಕ್ಕಮಗಳೂರು
- ಚಂದ್ರಶೇಖರ್ ರೆಡ್ಡಿ – ಸ.ಕಿ.ಪ್ರಾ. ಶಾಲೆ ಕೆ.ರಾಂಪುರ, ಮಧುಗಿರಿ
- ಸುಧಾಕರ ಗಣಪತಿ ನಾಯಕ – ಸ.ಹಿ.ಪ್ರಾ. ಶಾಲೆ ಕಂಚನಹಳ್ಳಿ, ಶಿರಸಿ
- ಈಶ್ವರಪ್ಪ ಅಂದಾನಪ್ಪ ರೇವಡಿ – ಸ.ಹಿ.ಪ್ರಾ. ಶಾಲೆ ಹಿರೇಕೊಪ್ಪ, ಗದಗ
- ಕವಿತಾ ಈ – ಸ.ಕಿ.ಪ್ರಾ. ಶಾಲೆ ಬೋರಪ್ಪನಗುಡಿ, ಚಿತ್ರದುರ್ಗ
ಪ್ರೌಢ ಶಾಲಾ ಶಿಕ್ಷಕರ ವಿಭಾಗ
- ಮಹೇಶ್ ಕೆಎನ್ – ಶ್ರೀ ಆಂಜನೇಯ ಪ್ರೌಢ ಶಾಲೆ ಕಡ್ಲೇಗುದ್ದು, ಚಿತ್ರದುರ್ಗ
- ಇಬ್ರಾಹಿಂ ಎಸ್‌ಎಂ – ಸ.ಪ್ರೌ.ಶಾಲೆ ನೇರುಗಳಲೆ, ಸೋಮವಾರಪೇಟೆ
- ರಘು ಬಿಎಂ – ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಶಿವಮೊಗ್ಗ
- ಭೀಮಪ್ಪ – ಬಾಲಕಿಯರ ಸ.ಪ್ರೌ. ಶಾಲೆ ಮಸ್ಕಿ, ರಾಯಚೂರು
- ರಾಧಾಕೃಷ್ಣ ಟಿ – ಸ.ಪ.ಪೂ.ಕಾಲೇಜು, ಕೆಯ್ಯೂರು, ಬೆಳ್ತಂಗಡಿ
- ನಾರಾಯಣ ಪರಮೇಶ್ವರ ಭಾಗವತ – ಮಾರಿಕಾಂಬಾ ಸ.ಪ.ಪೂ.ಕಾಲೇಜು, ಶಿರಸಿ
- ಅರುಣ ಜೂಡಿ – ಸ.ಪ.ಪೂ.ಕಾಲೇಜು ಕಿನ್ನಾಳ, ಕೊಪ್ಪಳ
- ಸುನೀಲ ಪರೀಟ – ಸ.ಪ್ರೌ.ಶಾಲೆ ಲಕ್ಕುಂಡಿ, ಬೆಳಗಾವಿ
- ಬಾಲಸುಬ್ರಹ್ಮಣ್ಯ ಎಸ್‌ಟಿ – ಸ.ಪ್ರೌ.ಶಾಲೆ ಕೊಕ್ಕರೆ ಬೆಳ್ಳೂರು, ಮಂಡ್ಯ
- ಡಾ. ಚೇತನ್ ಬಣಕಾರ – ಬಾಲಕಿಯರ ಸ.ಪ್ರೌ.ಶಾಲೆ ಹರಪ್ಪನಹಳ್ಳಿ, ವಿಜಯನಗರ
- ಕೀರ್ತಿ ಬಸಪ್ಪ ಲಗಳಿ – ಸ.ಪ್ರೌ.ಶಾಲೆ ಮಿಟ್ಟೇಮರಿ, ಚಿಕ್ಕಬಳ್ಳಾಪುರ
ಇದನ್ನೂ ಓದಿ | ಅಮೃತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ