Site icon Vistara News

Sirsi News: ಸೆ.3ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಸ್ವರಾಜ್ಯ ಕವಿಗೋಷ್ಠಿ; 25 ಕವಿಗಳು ಭಾಗಿ

Poetry Festival

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ರಾಜ್ಯ ಘಟಕದ ವತಿಯಿಂದ ಸೆಪ್ಟೆಂಬರ್‌ 3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ಗಂಟೆವರೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ರಾಜ್ಯ ಮಟ್ಟದ ʼಸ್ವರಾಜ್ಯ ಕವಿಗೋಷ್ಠಿʼ ಆಯೋಜಿಸಲಾಗಿದೆ. ʼಸ್ವರಾಜ್ಯ-ಸುರಾಜ್ಯʼ ವಿಷಯದ ಕುರಿತು ನಡೆಯಲಿರುವ ಕವಿಗೋಷ್ಠಿಯಲ್ಲಿ 25 ಕವಿಗಳು ಭಾಗವಹಿಸಲಿದ್ದಾರೆ.

ಬೆಳಗ್ಗೆ 10ಗಂಟೆಗೆ ಕವಿಗೋಷ್ಠಿ ಉದ್ಘಾಟನೆಯಾಗಲಿದ್ದು, 11 ಗಂಟೆಗೆ ಕವನವಾಚನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅವಲೋಕನ, 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕವಿಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಉಪಾಧ್ಯಕ್ಷ, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್‌, ಸಂಸ್ಕೃತ ಅಧ್ಯಾಪಕ, ಕವಿ ರಾಘವೇಂದ್ರ ರಾವ್‌ ಹಾಗೂ 25 ಕವಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | NAVIKA Summit: ಮತ್ತೆ ಬಂದ ನಾವಿಕ! ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ತಯಾರಿ, ಕ್ಷಣಗಣನೆ

Exit mobile version