ಬೆಂಗಳೂರು: ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ಕೊಡಮಾಡುವ ಕ್ರೀಡಾ ಪ್ರಶಸ್ತಿಗೆ (Sports awards) ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ ೬ರಂದು (ಮಂಗಳವಾರ) ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಅವರು ತಿಳಿಸಿದರು.
ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದವರಿಗೆ ಏಕಲವ್ಯ ಪ್ರಶಸ್ತಿ, ಕ್ರೀಡಾ ರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆ ಪ್ರಶಸ್ತಿಗೆ 6 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದರು.
ಡಿಸೆಂಬರ್ 6ರಂದು ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾರತ್ನ ಪ್ರಶಸ್ತಿ
೧. ಕವನ ಎಂ.ಎಂ- ಬಾಲ್ ಬ್ಯಾಡ್ಮಿಂಟನ್
೨. ಬಿ. ಗಜೇಂದ್ರ – ಗುಂಡು ಎತ್ತುವುದು
3. ಶ್ರೀಧರ್ – ಕಂಬಳ ಕ್ಷೇತ್ರ
4. ರಮೇಶ್ ಮಳವಾಡ್- ಖೋಖೋ
5. ವೀರಭದ್ರ ಮುಧೋಳ್- ಮಲ್ಲಕಂಬ
೬. ಖುಷಿ ಎಚ್ – ಯೋಗ
7. ಲೀನಾ ಅಂತೋಣಿ ಸಿದ್ದಿ- ಮಟ್ಟಿ ಕುಸ್ತಿ
8. ದರ್ಶನ್-ಕಬಡ್ಡಿ
ಏಕಲವ್ಯ ಪ್ರಶಸ್ತಿ
೧. ಚೇತನ್ ಬಿ- ಅಥ್ಲೆಟಿಕ್ಸ್
2. ಶಿಖಾ ಗೌತಮ್- ಬ್ಯಾಡ್ಮಿಂಟನ್
3. ಕೀರ್ತಿ ರಂಗಸ್ವಾಮಿ-ಸೈಕ್ಲಿಂಗ್
4. ಅದಿತ್ರಿ ವಿಕ್ರಾಂತ್ ಪಾಟೀಲ್- ಫೆನ್ಸಿಂಗ್
5. ಅಮೃತ್ ಮುದ್ರಾಬೆಟ್- ಜಿಮ್ನಾಸ್ಟಿಕ್
6. ಶೇಷೇಗೌಡ-ಹಾಕಿ
7. ರೇಷ್ಮಾ ಮರೂರಿ- ಲಾನ್ ಟೆನ್ನಿಸ್
8. ಟಿ.ಜೆ ಶ್ರೀಜಯ್- ಶೂಟಿಂಗ್
9. ತನೀಷ್ ಜಾರ್ಜ್ ಮ್ಯಾಥ್ಯೂ-ಈಜು
10. ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್
11. ಹರಿಪ್ರಸಾದ್ – ವಾಲಿಬಾಲ್
12. ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ
13. ಎಚ್.ಎಸ್ ಸಾಕ್ಷತ್- ನೆಟ್ ಬಾಲ್
14. ಮನೋಜ್ ಬಿ.ಎಂ- ಬ್ಯಾಸ್ಕೆಟ್ ಬಾಲ್
15. ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್ಸ್
ಜೀವಮಾನ ಸಾಧನೆ ಪ್ರಶಸ್ತಿ
೧. ಅಲ್ಕಾ ಎನ್ ಪಡುತಾರೆ- ಸೈಕ್ಲಿಂಗ್
2. ಬಿ ಆನಂದ್ ಕುಮಾರ್- ಪ್ಯಾರಾ ಬ್ಯಾಡ್ಮಿಂಟನ್
3. ಶೇಖರಪ್ಪ-ಯೋಗ
4. ಅಶೋಕ್ ಕೆಸಿ – ವಾಲಿಬಾಲ್
5. ರವೀಂದ್ರ ಶೆಟ್ಟಿ- ಕಬಡ್ಡಿ
6. ಬಿ.ಜೆ ಅಮರನಾಥ್- ಯೋಗ
ಕ್ರೀಡಾ ಪೋಷಕ ಪ್ರಶಸ್ತಿ
೧. ಬಿ.ಎಂ.ಎಸ್. ಮಹಿಳಾ ಕಾಲೇಜು- ಬೆಂಗಳೂರು ನಗರ ಜಿಲ್ಲೆ
೨. ಮಂಗಳ ಫ್ರೆಂಡ್ಸ್ ಸರ್ಕಲ್- ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
೩. ನಿಟ್ಟೆ ಎಜುಕೇಷನ್ ಟ್ರಸ್ಟ್-ಉಡುಪಿ
ಇದನ್ನೂ ಓದಿ | Dhayn Chand Khel Ratna | ಕ್ರೀಡಾ ಕ್ಷೇತ್ರದ ಅತ್ಯುನ್ನತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಶರತ್ ಕಮಾಲ್