Site icon Vistara News

Statue desecration : ಮಂತ್ರಾಲಯದಲ್ಲಿ ಶ್ರೀ ರಾಮಚಂದ್ರನ ವಿಗ್ರಹಕ್ಕೆ ಹಾನಿ, ಎಡಗೈ ಧ್ವಂಸ : ತನಿಖೆಗೆ ಆಗ್ರಹ

mantralaya statue

#image_title

ರಾಯಚೂರು: ಶ್ರೀ ಕ್ಷೇತ್ರ ಮಂತ್ರಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಶ್ರೀ ರಾಮಚಂದ್ರನ ವಿಗ್ರಹಕ್ಕೆ ಹಾನಿಯುಂಟು (Statue desecration) ಮಾಡಲಾಗಿದೆ. ಶ್ರೀ ರಾಮಚಂದ್ರನ ವಿಗ್ರಹದ ಎಡಗೈ ಧ್ವಂಸವಾಗಿದೆ.

ಸುಮಾರು 15 ದಿನಗಳ ಹಿಂದೆ ವಿಗ್ರಹ ಹಾನಿಯಾದ ಬಗ್ಗೆ ಶಂಕೆ ಇದ್ದು, ಉದ್ದೇಶಪೂರ್ವಕವಾಗಿ ವಿಗ್ರಹ ಹಾನಿ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಬಜರಂಗ ದಳ ಸಂಘಟನೆಯಿಂದ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದೆ.

ಮಂತ್ರಾಲಯದ ಗುರುಗಳಾದ ಶ್ರೀ ಸುಬುಧೇಂದ್ರ ತೀರ್ಥರಿಗೆ ಬಜರಂಗ ದಳ ಮುಖಂಡರು ಮಾಹಿತಿ ನೀಡಿದ್ದಾರೆ. ಶುಕ್ರವಾರ (ಮಾ. 10) ವಿಶ್ವ ಹಿಂದು ಪರಿಷತ್‌ ಮುಖಂಡರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಸದ್ಯ ಧ್ವಂಸವಾದ ವಿಗ್ರಹಕ್ಕೆ ಕೇಸರಿ ಶಾಲು ಸುತ್ತಿ ರಕ್ಷಣೆ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ವಿಶ್ವ ಹಿಂದು ಪರಿಷತ್‌ ಮುಖಂಡರು ಪೊಲೀಸ್‌ ಠಾಣೆಗೆ ಭೇಟಿ ನೀಡಿ ತನಿಖೆಗೆ ಆಗ್ರಹಿಸಲಿದ್ದಾರೆ.

ದೇವಸ್ಥಾನದ ಮುಂಭಾಗದಲ್ಲಿರುವ ಈ ವಿಗ್ರಹದ ಕೈಗಳನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದರೇ, ಆಕಸ್ಮಿಕವಾಗಿ ಈ ಘಟನೆ ನಡೆಯಿತೇ ಎನ್ನುವ ಬಗ್ಗೆ ತನಿಖೆಯಿಂದ ತಿಳಿದುಬರಬೇಕಾಗಿದೆ.

ಇದನ್ನೂ ಓದಿ : Guru Raghavendra Swamy : ಮಂತ್ರಾಲಯದ ಕೀರ್ತಿ ಮುಕುಟ ಶ್ರೀ ರಾಘವೇಂದ್ರ ಸ್ವಾಮಿಗಳು

Exit mobile version