Site icon Vistara News

Karnataka CM: ದಿಢೀರನೆ ಕಾಣಿಸಿಕೊಂಡ ಹೊಟ್ಟೆ ಉರಿ, ದೆಹಲಿಗೆ ತೆರಳದ ಡಿಕೆಶಿ; ಸಿಎಂ ಘೋಷಣೆ ಮತ್ತೆ ವಿಳಂಬ?

DK Shivkumar warning

Stomachache For DK Shivakumar; Delhi Travel Cancelled

ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ (Karnataka CM) ಘೋಷಣೆಗೆ ದೆಹಲಿಯಲ್ಲಿ ವೇದಿಕೆ ಸಿದ್ಧವಾಗಿರುವ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ದೆಹಲಿಗೆ ಹಾರಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೆಹಲಿ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಶಿವಕುಮಾರ್‌ ಅವರಿಗೆ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರನ್ನು ಕರೆಸಿಕೊಂಡಿದ್ದಾರೆ. ಹಾಗಾಗಿ ಅವರು ದೆಹಲಿ ಪ್ರವಾಸ ರದ್ದಗೊಳಿಸಿದ್ದಾರೆ. ಹಾಗಾಗಿ, ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆ ಯಾವಾಗ ಎಂಬ ಪ್ರಶ್ನೆ ಮೂಡಿದೆ.

ಡಿ.ಕೆ.ಶಿವಕುಮಾರ್‌ ಅವರು ಸೋಮವಾರ ಸಂಜೆಯೇ ದೆಹಲಿಗೆ ತೆರಳುವುದು ದೃಢವಾಗಿತ್ತು. ಹಾಗಾಗಿ, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಅವರು ಕೂಡ ದೇವರ ದರ್ಶನ ಪಡೆದು ಹೊರಡಲು ಅಣಿಯಾಗಿದ್ದರು. ಆದರೆ, ಕೊನೇ ಕ್ಷಣದಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗ್ಯಾಸ್‌ಸ್ಟಿಕ್‌ ಸಮಸ್ಯೆ ಇದೆ. ಹೊಟ್ಟೆಯಲ್ಲಿ ಉರಿ ಉರಿ ಇದೆ. ಡಾಕ್ಟರ್‌ ಬರುತ್ತಾರೆ” ಎಂದು ಹೇಳಿದರು. ದೆಹಲಿಗೆ ಹೋಗುತ್ತೀರಾ ಎಂದು ಸುದ್ದಿಗಾರರು ಕೇಳಿದ್ದಕ್ಕೆ ಉತ್ತರಿಸದೆಯೇ ಹೋದರು.

“ಬಲ ಪ್ರದರ್ಶಿಸಲು ನನ್ನ ಬಳಿ ವೈಯಕ್ತಿಕ ಸಂಖ್ಯಾಬಲವಿಲ್ಲ. ಪಕ್ಷದ 135 ಶಾಸಕರು ಕೂಡ ನನ್ನವರೇ. ನಾನು ವ್ಯಕ್ತಿ ಪೂಜೆ ಮಾಡುವುದಿಲ್ಲ. ನಾನು ಪಕ್ಷದ ಪೂಜೆ ಮಾಡುವವನು. ನನಗೆ ಸಮಯ ಪ್ರಜ್ಞೆ ಇದೆ, ತಾಳ್ಮೆ ಇದೆ, ಹೋರಾಟದ ಛಲ ಇದೆ. ಯಶಸ್ಸಿಗೆ ಎಷ್ಟು ಬೇಕೋ ಅಷ್ಟು ತಾಳ್ಮೆ ಇದೆ” ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ: Karnataka Election 2023 : ನನ್ನ ಬಳಿ 135 ಶಾಸಕರಿದ್ದಾರೆ ಎಂದು ಡಿಕೆಶಿ ಕುಟುಕಿದ್ದು ಯಾರಿಗೆ?

ಪರೋಕ್ಷವಾಗಿ ಡಿಕೆಶಿ ಅಸಮಾಧಾನ

ನನ್ನನ್ನ ಬಂಡೆ ಎಂದು ಕರೆದಿದ್ದೀರ. ವಿಗ್ರಹವಾದ್ರೂ ಮಾಡಿ, ವಿಧಾನಸೌಧಕ್ಕೆ ಚಪ್ಪಡಿಯಾದ್ರು ಮಾಡಿ, ಮರಳಾದ್ರು ಮಾಡಿ, ಗರುಡು ಗಂಬವಾದ್ರು ಮಾಡಿ. ಒಟ್ನಲ್ಲಿ ವಿಧಾನಸೌಧಕ್ಕೆ ಚಪ್ಪಡಿ ಮಾಡಿ ಅಂತ ಹೇಳಿದ್ದೆ. ನನ್ನ ಹತ್ತಿರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೀನಿ ವ್ಯಕ್ತಿ ಪೂಜೆಯಲ್ಲ ಎಂದು ಪರೋಕ್ಷವಾಗಿ ಹೈಕಮಾಂಡ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka CM: ವಿಗ್ರಹವಾದರೂ ಮಾಡಿ, ಚಪ್ಪಡಿಯಾದರೂ ಮಾಡಿ ಎಂದ ʼಬಂಡೆʼ: ಹೈಕಮಾಂಡ್‌ ವಿರುದ್ಧ ಡಿ.ಕೆ. ಶಿವಕುಮಾರ್‌ ಬೇಸರ?

ಸಿಎಂ ಸ್ಥಾನ ಕೊಡಿ ಇಲ್ಲದಿದ್ದರೆ ಏನೂ ಬೇಡ ಎಂದು ಹೈಕಮಾಂಡ್‌ಗೆ ತಿಳಿಸಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನನಗೆ ತಾಳ್ಮೆ ಸಮಯ ಪ್ರಜ್ಞೆ ಹೋರಾಟ ಮನೋಭಾವವಿದೆ. ಪಾಂಡವರ ಸೂತ್ರ ಅನುಸರಿಸ್ತೇವೆ ಅಂತ ವಿಧಾನ ಸಭೆಯಲ್ಲಿ ಹೇಳಿದ್ದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ. ಇಷ್ಟು ಸಾಕು ನನಗೆ ಎಂದರು.

Exit mobile version