Site icon Vistara News

School tragedy | ಉರುಳಿದ ಶಾಲಾವರಣದ ಕಲ್ಲಿನ ಕಂಬಗಳು, ಮೂವರು ಮಕ್ಕಳಿಗೆ ಗಾಯ, ಪ್ರಾಣಾಪಾಯದಿಂದ ಜಸ್ಟ್‌ ಮಿಸ್‌

school stone

ತುಮಕೂರು: ಶಾಲೆಯ ಆವರಣದಲ್ಲಿದ್ದ ಕಂಬಗಳನ್ನು ಇದ್ದಕ್ಕಿದ್ದಂತೆ ಉರುಳಿ (School tragedy) ಭಾರಿ ಆತಂಕ ಸೃಷ್ಟಿಯಾದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಸರ್ಕಾರಿ ಕಿರಿಯ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂರು ಮಕ್ಕಳು ಗಾಯಗೊಂಡಿದ್ದಾರಾದರೂ ಜೀವಾಪಾಯದಿಂದ (ಪಾರಾಗಿದ್ದಾರೆ.

ಇದು ಕಿರಿಯ ಪ್ರಾಥಮಿಕ ಶಾಲೆ. ಮಧ್ಯಾಹ್ನ ಹೊತ್ತು ಊಟ ಮಾಡಿ ಮಕ್ಕಳು ಆವರಣದಲ್ಲಿರುವ ಮೈದಾನದಲ್ಲಿ ಆಟವಾಡುತ್ತಿದ್ದರು. ಆಗ ಒಮ್ಮಿದೊಮ್ಮೆಗೇ ಕಂಬಗಳು ಮುರಿದು ಬಿದ್ದವು. ವಸ್ತುಶಃ ಮಕ್ಕಳ ಮೇಲೇ ಈ ಕಂಬಗಳು ಇದ್ದುವಾದರೂ ಯಾವುದೇ ಜೀವಾಪಾಯ ಆಗಲಿಲ್ಲ.

ಗಾಯಗೊಂಡಿರುವ ಉಲ್ಲಾಸ್ (4ನೇ ತರಗತಿ), ಯಶಸ್ (1ನೇ), ಕುಶಲ (4ನೇ) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಲ್ಲಾಸ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಇತರೆ ಮಕ್ಕಳು ಹೆದರಿ ಓಡಿಹೋಗಿದ್ದಾರೆ.

ಈ ಕಂಬಗಳು ಶಿಥಿಲವಾಗಿದ್ದರಿಂದ ಮುರಿದು ಬಿದ್ದಿವೆ ಎಂದು ಹೇಳಲಾಗಿದೆ. ದೊಡ್ಡ ಕಂಬ ಮುರಿದು ಬಿದ್ದ ಹೊಡೆತಕ್ಕೆ ಆಸುಪಾಸಿನ ಇತರ ಸಣ್ಣ ಕಂಬಗಳೂ ತುಂಡಾಗಿ ಬಿದ್ದಿವೆ. ಕೆಲವು ಶಾಲೆಯ ಜಗಲಿ ಮೇಲೆ ಬಿದ್ದಿವೆ. ಅಲ್ಲೂ ಕೆಲವು ಮಕ್ಕಳಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಹೇಗಾಯಿತು ಎಂಬ ಬಗ್ಗೆ ಎಸ್‌ಡಿಎಂಸಿ ಪರಿಶೀಲನೆ ಮುಂದಾಗಿದೆ. ಬಿಇಒ ಕೂಡಾ ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.

ಇದನ್ನೂ ಓದಿ | Student death | ಅತಿಥಿ ಶಿಕ್ಷಕನ ಹುಚ್ಚಾಟ: ಮನ ಬಂದಂತೆ ಥಳಿಸಿದ್ದರಿಂದ ಬಾಲಕ ಸಾವು, ಶಿಕ್ಷಕಿಯಾದ ತಾಯಿಗೂ ಹೊಡೆತ

Exit mobile version