ಬೆಂಗಳೂರು: ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (NR Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murthy) ಅವರು ಮತ್ತೊಂದು ಸಾಹಿತ್ಯ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಬರೆದ ಕತೆಗಳು ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಲಿವೆ. ಹೌದು, ‘ಸುಧಾ ಅಮ್ಮನೊಂದಿಗೆ ಕಥಾ ಸಮಯ’ (Story Time with Sudha Amma) ಶೀರ್ಷಿಕೆಯಡಿ ಮಕ್ಕಳಿಗಾಗಿ ಆನಿಮೆಟೆಡ್ ಸರಣಿಗೆ ತಮ್ಮ ಕತೆಗಳನ್ನು ನೀಡಲು ಅವರು ಒಪ್ಪಿಕೊಂಡಿದ್ದಾರೆ ಎಂದು ಸುಧಾರಮೂರ್ತಿ ಅವರ ಪುತ್ರ ರೋಹನ್ ಮೂರ್ತಿ (Rohan Murthy) ಅವರು ಹೇಳಿದ್ದಾರೆ.
ಲಿಂಕ್ಡಇನ್‌ನಲ್ಲಿ ಈ ಕುರಿತು ರೋಹನ್ ಮೂರ್ತಿ ಮಾಹಿತಿಯನ್ನು ಷೇರ್ ಮಾಡಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ಮಕ್ಕಳು ಮತ್ತು ಅವರ ಪೋಷಕರಿಂದ ಸಾವಿರಾರು ಪತ್ರಗಳು ಮತ್ತು ಇಮೇಲ್‌ಗಳಿಂದ ಉತ್ತೇಜಿತರಾದ ನನ್ನ ತಾಯಿ ತಮ್ಮ ಕಥೆಗಳನ್ನು ಮಕ್ಕಳಿಗಾಗಿ ಅನಿಮೇಟೆಡ್ ಸರಣಿಗೆ ನೀಡಲು ಒಪ್ಪಿಕೊಂಡರು” ಎಂದು ರೋಹನ್ ಮೂರ್ತಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಲ್ಲಿ ವಿಡಿಯೋ ವೀಕ್ಷಿಸಿ
‘ಸುಧಾ ಅಮ್ಮನೊಂದಿಗೆ ಕಥಾ ಸಮಯ’ ಆನಿಮೆಟೆಡ್ ಸರಣಿ ಕಥೆಗಳು 2023ರ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ. ಕನ್ನಡವೂ ಸೇರಿದಂತೆ 6 ಭಾಷೆಗಲ್ಲಿ ಈ ಆನಿಮೆಟೆಡ್ ಸರಣಿ ಕತೆಗಳು ಸಿಗಲಿವೆ. ಅಂದರೆ, ಇಂಗ್ಲಿಷ್, ಹಿಂದಿ, ಮರಾಠಿ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಹೊರ ಬರಲಿವೆ.
ಈ ಸುದ್ದಿಯನ್ನೂ ಓದಿ: Sudha Murthy: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್
ಆನಿಮೆಟೆಡ್ ಕಥಾ ಸರಣಿಗೆ, ಸುಧಾಮೂರ್ತಿ ಅವರು ಬರೆದ, ಹೆಚ್ಚು ಮಾರಾಟವಾದ ಮಕ್ಕಳ ಕತೆಗಳಿಂದಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸರಣಿಯು ಮಕ್ಕಳಿಗೆ ಎಲ್ಲೆಡೆ ಮತ್ತು ಪೇವಾಲ್ ಇಲ್ಲದೆ ಉಚಿತವಾಗಿ ದೊರೆಯಲಿದೆ ಎಂದು ರೋಹನ್ ಮೂರ್ತಿ ಅವರು ತಿಳಿಸಿದ್ದಾರೆ.
ನಾನು ನಿಮಗಾಗಿ ಬರೆದ ಈ ಎಲ್ಲಾ ಪಾತ್ರಗಳು ನನ್ನ ಮನಸ್ಸಿನಲ್ಲಿ ಬರುತ್ತವೆ, ಅವು ನನ್ನೊಂದಿಗೆ ಮಾತನಾಡುತ್ತವೆ. ಅವರಲ್ಲಿ ಕೆಲವರು ಹಠಮಾರಿಗಳು, ಕೆಲವರು ತುಂಬಾ ಧೈರ್ಯಶಾಲಿಗಳು ಮತ್ತು ಕೆಲವರು ಹೆದರುತ್ತಾರೆ. ನಾನು ಅವರ ಸಹವಾಸವನ್ನು ಆನಂದಿಸಿದೆ. ಅವರು ಅನಿಮೇಟೆಡ್ ಅಲ್ಲ. ಅವರು ಯಾವ ಬಣ್ಣದ ಡ್ರೆಸ್ ಧರಿಸುತ್ತಾರೆ, ಅವರು ಎಷ್ಟು ಹಠಮಾರಿಗಳು, ಅವರು ಎಷ್ಟು ಧೈರ್ಯಶಾಲಿಗಳು ಎಂಬುದನ್ನು ತೋರಿಸಲು ನಾನು ಅವರನ್ನು ಜೀವಂತವಾಗಿ ತರಲು ಬಯಸುತ್ತೇನೆ ಎಂದು ವಿಡಿಯೋವೊಂದರಲ್ಲಿ ಸುಧಾಮೂರ್ತಿ ಅವರು ಈ ಕುರಿತು ಹೇಳಿಕೊಂಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.