ತುಮಕೂರು, ಕರ್ನಾಟಕ: ತುಮಕೂರು ಸಂಸದ ಜಿ ಎಸ್ ಬಸವರಾಜು ಆಪ್ತ ಕುಂದರನಹಳ್ಳಿ ರಮೇಶ್ ಅವರ ಮೇಲೆ ಭಾನುವಾರ ತಡ ರಾತ್ರಿ ಹಲ್ಲೆ ನಡೆದಿದೆ. ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ(Karnataka Election 2023).
ಭಾನುವಾರ ತುಮಕೂರು ನಗರದ ಸಿ.ಎನ್.ವಿ ಚೇಂಬರ್ ಲಾಡ್ಜ್‌ನಲ್ಲಿ ಕುಂದರನಹಳ್ಳಿ ರಮೇಶ್ ಅವರು ತಂಗಿದ್ದರು. ಕೆಲವರು ಮಧ್ಯರಾತ್ರಿ 1-30ಕ್ಕೆ ಪೊಲೀಸರ ಸೋಗಿನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಚುನಾವಣೆಗೆ ಹಂಚಲು ಹಣ ತಂದಿಟ್ಟುಕೊಂಡಿದ್ಯಾ? ಎಂದು ಅಪರಿಚಿತರು ಪ್ರಶ್ನಿಸಿದ್ದಾರೆ. ಬ್ಯಾಗ್, ಹಾಸಿಗೆ, ದಿಂಬು ಎಲ್ಲವನ್ನೂ ಶೋಧ ಮಾಡಿ 23,000 ರೂ ದೋಚಿ ಪರಾರಿ.
ಹಲ್ಲೆ ನಡೆಸಿದ ಒಟ್ಟು ನಾಲ್ಕು ಜನರ ವಿರುದ್ದ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲು. ನಿಖಿಲ್, ಸಾಧಿಕ್, ಹೇಮಂತ್, ರಕ್ಷಿತ್ ಎನ್ನುವವರ ವಿರುದ್ದ ದೂರು ದಾಖಲು ಮಾಡಿಕೊಳ್ಳಲಾಗಿದೆ.
ಜ್ಯೋತಿ ಗಣೇಶ್ ವಿರುದ್ಧ ಸೊಗಡು ಆರೋಪ
ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಚುನಾವಣಾ ಅಕ್ರಮ ಮಾಡುತ್ತಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಸೊಗಡು ಶಿವಣ್ಣ ಅವರು ಆರೋಪಿಸಿದ್ದಾರೆ. ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಸೊಗಡು ಆರೋಪಿಸಿದ್ದಾರೆ. ಬಿಜೆಪಿಗರು ಮತದಾರರಿಗೆ ಹಂಚಲು ತಂದಿದ್ದ ಹಣ ಸೀಜ್ ಮಾಡದೇ ಪೊಲೀಸರು ವಾಪಸ್ ಹೋಗಿದ್ದಾರೆ. ಹಣ ಇರುವ ಬಗ್ಗೆ ಸುಳಿವು ಕೊಟ್ಟವರ ಮೇಲೆ ಕೇಸ್ ಹಾಕಿದ್ದಾರೆ. ಭಾನುವಾರ ರಾತ್ರಿ ಸಿಎನ್‌ವಿ ಸಿಎನ್ ವಿ ಲಾಡ್ಜ್ ನಲ್ಲಿ ಬಿಜೆಪಿ ಸಂಸದ ಬಸವರಾಜು ಆಪ್ತ ಹಣ ಇಟ್ಟುಕೊಂಡಿದ್ದರು.
ಹಣ ಇಟ್ಟುಕೊಂಡವರ ವಿರುದ್ದ ಕೇಸ್ ಹಾಕುವ ಬದಲು ಸುಳಿವು ಕೊಟ್ಟವರ ವಿರುದ್ದ ಕೇಸ್ ಹಾಕಿದ್ದಾರೆ ಎಂದು ಸೊಗಡು ಅವರು ಆರೋಪಿಸಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಆಪ್ತ ಕುಂದರನಹಳ್ಳಿ ರಮೇಶ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಗಡು ಶಿವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಬಿಜೆಪಿ, ಸಿಪಿಎಂ ನಾಯಕರ ಮೇಲೆ ಹಲ್ಲೆ, ಪ್ರಕರಣ ದಾಖಲು