Site icon Vistara News

Street dog attack : ಹೊಸಪೇಟೆಯಲ್ಲಿ ನಿಲ್ಲದ ಬೀದಿ ನಾಯಿ ಆಕ್ರಮಣ, 12 ವರ್ಷದ ಬಾಲಕನಿಗೆ ಕಚ್ಚಿ ತೀವ್ರ ಗಾಯ

Street dog

#image_title

ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ (Street dog attack) ಮೇರೆ ಮೀರಿದೆ. ಕಳೆದ ಒಂದು ತಿಂಗಳಲ್ಲಿ ಹಲವರು ಬೀದಿ ನಾಯಿ ದಾಳಿಗೆ ತುತ್ತಾಗಿದ್ದು, ಈ ನಾಯಿಗಳು ಮಕ್ಕಳನ್ನು ಹೆಚ್ಚಾಗಿ ಟಾರ್ಗೆಟ್‌ ಮಾಡಿದಂತೆ ಕಾಣುತ್ತಿದೆ. ಗುರುವಾರ ಉಲ್ಲಾಸ್‌ ಎಂಬ ೧೨ ವರ್ಷದ ಬಾಲಕನಿಗೆ ನಾಯಿ ಕಚ್ಚಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

20 ದಿನದ ಹಿಂದೆ ಚಿತ್ತವಾಡ್ಗಿಯ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದಾಗ ನಾಯಿಯೊಂದು ಆಕ್ರಮಣ ನಡೆಸಿತ್ತು. ಬೀದಿ ನಾಯಿ ಆಕೆಯ ಮುಖಕ್ಕೇ ಕಚ್ಚಿ ತೀವ್ರ ಗಾಯಗೊಳಿಸಿತ್ತು. ಈಗ ಮತ್ತೆ ಅದೇ ಏರಿಯಾದಲ್ಲಿ 12 ವರ್ಷದ ಬಾಲಕನಿಗೆ ಬೀದಿ ನಾಯಿ ಕಚ್ಚಿದೆ. ಚಿತ್ತವಾಡ್ಗಿಯ ಸಂತೆಬಯಲು ನಿವಾಸಿ ಲಿಂಗಪ್ಪ ಎನ್ನುವ ಆಟೋ ಚಾಲಕನ ಮಗನಾಗಿರುವ ಉಲ್ಲಾಸ್‌ ಆಸ್ಪತ್ರೆ ಸೇರಿದ್ದಾನೆ.

ಬೀದಿ ನಾಯಿಗಳ ಹಾವಳಿಯಿಂದ ಚಿತ್ತವಾಡ್ಗಿಯ ನಿವಾಸಿಗಳು ಈಗ ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಇದೆ. ಅದರಲ್ಲೂ ಮುಖ್ಯವಾಗಿ ಮಕ್ಕಳನ್ನು ಹೊರಗೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ.

ಕಡಿವಾಣ ಹಾಕದ ನಗರಸಭೆ ಅಧಿಕಾರಿಗಳು

20 ದಿನಗಳ ಹಿಂದೆ ಬಾಲಕಿಗೆ ಬೀದಿ ನಾಯಿಗಳು ಕಚ್ಚಿದಾಗ ನಾಯಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದರು. ಆದರೆ, ಅಂಥ ಯಾವುದೇ ಕ್ರಮಗಳನ್ನು ಕೈಗೊಂಡಂತಿಲ್ಲ. ಎಲ್ಲ ಕಡೆ ಬೀದಿ ನಾಯಿಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಹೀಗಾಗಿ ಜನರು ರಸ್ತೆಯಲ್ಲಿ ಓಡಾಡಲು ಭಯ ಪಡುವ ಪರಿಸ್ಥಿತಿ ಇದೆ. ಹೀಗಾಗಿ ಆದಷ್ಟು ಬೇಗ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ನಗರಭೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Street dog attack | 10 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಊಟಕ್ಕೆ ಹೋಗುತ್ತಿದ್ದಾಗ ಅಟ್ಯಾಕ್‌

Exit mobile version