ಬೆಳಗಾವಿ: ಧಾರವಾಡದ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಖಬರಸ್ತಾನ್ ಬಳಿ ಮಲಗಿದ್ದ ಅನಾಥ ಭಿಕ್ಷುಕಿಯನ್ನು ಡೆಡ್ಲಿ ಬೀದಿ ನಾಯಿಗಳು ಕಚ್ಚಿ ಕೊಂದು ಹಾಕಿದ ಘಟನೆ ನಡೆದ ಬೆನ್ನಿಗೇ ಬೆಳಗಾವಿ ಜಿಲ್ಲೆಯ ಗೋಕಾಕಿನ ಸಂಗಮ ನಗರ ಎಪಿಎಂಸಿ ಆವರಣದಲ್ಲಿ ಬೀದಿ ನಾಯಿ (Street dog attack) ಹಲವರ ಮೇಲೆ ದಾಳಿ ಮಾಡಿದೆ.
ಸಂಗಮ ನಗರದಲ್ಲಿ ವಾಸ ಮಾಡುವ ಯುವಕರು, ಮಹಿಳೆಯರು ಸೇರಿದಂತೆ ಏಳು ಮಂದಿಗೆ ನಾಯಿ ಕಚ್ಚಿದೆ. ಅವರೆಲ್ಲರೂ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಆಗ ಎಲ್ಲಿಂದಲೋ ನುಗ್ಗಿ ಬಂದ ಬೀದಿ ಅವರ ಮೇಲೆ ಟ್ಯಾಕ್ ಮಾಡಿದೆ. ಇದು ಹುಚ್ಚು ನಾಯಿ ಎಂದು ಹೇಳಲಾಗಿದ್ದು, ಕಂಡ ಕಂಡವರಿಗೆ ಹಚ್ಚುತ್ತಾ ಮುಂದೆ ಸಾಗಿದೆ.
ದಾಳಿಗೆ ಒಳಗಾದವರಿಗೆ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯರು, ವೃದ್ಧರು ಭಾರಿ ಯಾತನೆ ಅನುಭವಿಸುತ್ತಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸದ ಆಡಳಿತದ ಮೇಲೆ ಕಿಡಿ ಕಾರಿದರು.
ಈ ಹಿಂದೆಯೂ ಸಹ ಹುಚ್ಚು ನಾಯಿ ದಾಳಿಗೆ ಒಳಗಾಗಿದ್ದ ಗೋಕಾಕ ಜನರು ಈಗ ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ | Street dog attack | ಮಲಗಿದ್ದ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿನಾಯಿಗಳು