Site icon Vistara News

Student suicide | ಪೋಷಕರು ಬುದ್ಧಿವಾದ ಹೇಳಿದರೆಂದು ವಿಷ ಸೇವಿಸಿದ ವಿದ್ಯಾರ್ಥಿ, ಆಸ್ಪತ್ರೆಯಲ್ಲಿ ಮೃತ್ಯು

Student udaya kumar

ಕೋಲಾರ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ಕಾರಣಗಳಿಗಾಗಿ ಜೀವವನ್ನೇ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲೊಬ್ಬ ಹುಡುಗ ಹೆತ್ತವರು ಬುದ್ಧಿವಾದ ಹೇಳಿದರೆಂದು ಸಿಟ್ಟುಕೊಂಡು ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾನೆ (Student suicide).

ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದ ಉದಯ್ ಕುಮಾರ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು. ತಾತಿಕಲ್ ಬಳಿ ಇರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಈಗ ೯ನೇ ತರಗತಿ ವಿದ್ಯಾರ್ಥಿ.

ಪೋಷಕರು ತನಗೆ ಬುದ್ಧಿವಾದ ಹೇಳಿದರೆಂದು ಬೇಸರಗೊಂಡೋ ಸಿಟ್ಟುಗೊಂಡೋ ಈತ ಸೋಮವಾರ ವಿಷ ಸೇವಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯ ಆಸ್ಪತ್ರೆಯಿಂದ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Boy death | ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

Exit mobile version