ತುಮಕೂರು: ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಗೆದ್ದು ಬಹುಮಾನ ಪಡೆಯುವ ಮುನ್ನವೇ ಹೃದಯಾಘಾತದಿಂದ ಸಾವಿಗೀಡಾದ ಮನ ಕಲಕುವ ಘಟನೆ ತುಮಕೂರು ತಾಲ್ಲೂಕಿನ ಚಿಕ್ಕತೊಟ್ಟಿಲುಕೆರೆ ಬಳಿ ನಡೆದಿದೆ. ವಿದ್ಯಾರ್ಥಿಯು 10ನೇ ತರಗತಿಯವನಾಗಿದ್ದಾನೆ.
ಭೀಮಾಶಂಕರ್ (15) ಸಾವನ್ನಪ್ಪಿದ ವಿದ್ಯಾರ್ಥಿ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್, ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ನಿನ್ನೆ ಚಿಕ್ಕತೊಟ್ಟಿಲುಕೆರೆ ಬಳಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ. ಕ್ರೀಡಾಕೂಟದಲ್ಲಿ ನಡೆದ ರಿಲೇ ಆಟದಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿದ್ದ ಭೀಮಾಶಂಕರ್.
ಆದರೆ ವೇದಿಕೆಗೆ ಬಂದು ಬಹುಮಾನ ಪಡೆಯುವ ಮೊದಲೇ ಹೃದಯಾಘಾತದಿಂದ ಕುಸಿದುಬಿದ್ದಿದ್ದಾನೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಆತನನ್ನು ಕರೆದೊಯ್ದು ದಾಖಲಿಸುವಷ್ಟರಲ್ಲಿ ಪ್ರಾಣಬಿಟ್ಟಿದ್ದಾನೆ. ಸದ್ಯ ವಿದ್ಯಾರ್ಥಿಯ ಮೃತದೇಹ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿದೆ. ಇಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Heart Attack: ಟ್ಯೂಷನ್ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ