Site icon Vistara News

Student Death | ವಸತಿ ಶಾಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

Student Death

ವಿಜಯಪುರ: ಇಲ್ಲಿನ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಶ್ರೀ ದತ್ತಾತ್ರೇಯ ಎಜುಕೇಶನ್ ಟ್ರಸ್ಟ್‌ನ ಆಕ್ಸ್‌ಫರ್ಡ್‌ ವಸತಿ ಶಾಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ (Student Death) ಶವ ಪತ್ತೆ ಆಗಿದೆ. ಅಜಯಕುಮಾರ್ ವಿರುಪಾಕ್ಷಿ ನುಚ್ಚಿ (17) ಮೃತಪಟ್ಟ ವಿದ್ಯಾರ್ಥಿ.

ಅಜಯಕುಮಾರ್‌ ವಿಜಯಪುರ ನಗರದ ಇಬ್ರಾಹಿಮಪುರ ಮೂಲದ ವಿದ್ಯಾರ್ಥಿ ಆಗಿದ್ದು, ನಾಗರಬೆಟ್ಟದ ಆಕ್ಸ್‌ಫರ್ಡ್ ವಸತಿ ಶಾಲೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿದ್ಯಾರ್ಥಿ ಸಾವಿನ ಸುತ್ತ ಹಲವು ಅನುಮಾನ

ಅಜಯಕುಮಾರ್ ಸಾವಿನ ಬಗ್ಗೆ ಆತನ ಪೋಷಕರು ಸಂಶಯ‌ ವ್ಯಕ್ತಪಡಿಸಿದ್ದಾರೆ. ಒಂದು ವಾರದ ಹಿಂದೆ ಶ್ರೀ ದತ್ತಾತ್ರೆಯ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ ಹಿರೇಮಠ ಅವರ ಪುತ್ರನೊಂದಿಗೆ ‌ಈತ ಜಗಳವಾಡಿದ್ದ ಎಂದು ತಿಳಿದು ಬಂದಿದೆ. ಬಳಿಕ ಅಜಯಕುಮಾರ್ ಪೋಷಕರು ಕಾಲೇಜಿಗೆ ತೆರಳಿ ಮಗನಿಗೆ ಭೇಟಿಯಾಗಿ ಬಂದಿದ್ದರು.

ಭಾನುವಾರ ನಸುಕಿನ ಜಾವ ಕಾಲೇಜಿನ ಸಿಬ್ಬಂದಿ ಅಜಯಕುಮಾರ್ ನೇಣು ಹಾಕಿಕೊಂಡಿದ್ದಾಗಿ ತಿಳಿಸಿದರು. ಹೀಗಾಗಿ ನನ್ನ ಮಗನ ಸಾವಿನಲ್ಲಿ ಸಂಶಯವಿದೆ ಎಂದು‌‌ ಕಾಲೇಜು ಆಡಳಿತ ಮಂಡಳಿ ವಿರುದ್ದ ದೂರು ನೀಡಲು‌ ಪೋಷಕರು ನಿರ್ಧಾರಿಸಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಇದನ್ನೂ ಓದಿ | Video | ಗರ್ಭಿಣಿ ಶ್ವಾನವನ್ನು ಹೊಡೆದು, ನೆಲದ ಮೇಲೆ ಎಳೆದಾಡಿ ಕೊಂದ ವಿದ್ಯಾರ್ಥಿಗಳು; ಇವರೆಂಥಾ ಕ್ರೂರಿಗಳಿರಬೇಕು

Exit mobile version