Site icon Vistara News

Student Murder : ಡ್ಯಾನ್ಸ್‌ ವಿಚಾರದಲ್ಲಿ ಘರ್ಷಣೆ; ಬೆಂಗಳೂರಿನ ಪಿಯು ವಿದ್ಯಾರ್ಥಿ ಮರ್ಡರ್‌

Suhail Murder

ಬೆಂಗಳೂರು: ರಾಜಧಾನಿಯ ಕಾಲೇಜೊಂದರಲ್ಲಿ ಡ್ಯಾನ್ಸ್‌ (Conflict over dance) ಮಾಡುವ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಜಗಳ ಹುಟ್ಟಿಕೊಂಡು ಒಬ್ಬ ವಿದ್ಯಾರ್ಥಿಯ ಕೊಲೆ (Student Murder) ನಡೆದಿದೆ. ಬಸವೇಶ್ವರನಗರದ ಮಂಜುನಾಥ್ ನಗರ ಗೌತಮ್ ಕಾಲೇಜ್ ಬಳಿ ಈ ಘಟನೆ ನಡೆದಿದ್ದು, ಸುಹೇಲ್ (17) ಎಂಬ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಸುಹೇಲ್‌ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು, ವಿದ್ಯಾರ್ಥಿಗಳ ನಡುವೆ ಡ್ಯಾನ್ಸ್‌ ಮಾಡುವ ವಿಚಾರಕ್ಕೆ ಸಂಬಂಧಿಸಿ ಗಲಾಟೆ ಆರಂಭವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ತೀವ್ರ ಗಾಯಗೊಂಡ ಸುಹೇಲ್‌ನನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ದಾರಿ ಮಧ್ಯದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಕೂಡಾ ಭೇಟಿ ನೀಡಿದ್ದಾರೆ.

ಬೆಂಗಳೂರಿನ ಕಾಲೇಜುಗಳಲ್ಲಿ ಹೆಚ್ಚಿದ ಕೊಲೆ

ಬೆಂಗಳೂರಿನ ಕಾಲೇಜುಗಳಲ್ಲಿ ಕೊಲೆ ನಡೆಯುವುದು ಇದು ಮೊದಲೇನಲ್ಲ. ಕಳೆದ ಕೆಲವು ತಿಂಗಳುಗಳಿಂದ ಇದು ಸಾಮಾನ್ಯ ಎಂಬಂತಾಗಿದೆ.

ಇದನ್ನೂ ಓದಿ: Student murder : ಲಯಸ್ಮಿತಾ ಕೊಲೆ ಪ್ರಕರಣ; ಮದುವೆಯಾಗಲು ನಿರಾಕರಿಸಿದ್ದಕ್ಕೆ ಚೂರಿ ಹಾಕಿದನಂತೆ ಪಾಗಲ್‌ ಪ್ರೇಮಿ

-ಏಪ್ರಿಲ್‌ 29ರಂದು ಬೆಂಗಳೂರಿನ ರೇವಾ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಭಾಸ್ಕರ ಜಟ್ಟಿ (22) ಎಂಬ ಯುವಕನ ಕೊಲೆಯಾಗಿತ್ತು. ‘ರೇವೋತ್ಸವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗಲಾಟೆಯಾಗಿ 4ನೇ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಭಾಸ್ಕರ್‌ ಜಟ್ಟಿ (22) ಎಂಬಾತನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಮತ್ತೊಬ್ಬ ವಿದ್ಯಾರ್ಥಿ ಶರತ್‌ಗೂ ಗಾಯವಾಗಿತ್ತು.

Exit mobile version