Site icon Vistara News

Self Harming : ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌; ಪ್ರತಿಷ್ಠಿತ ಕಾಲೇಜಿನ ಮೇಲೆ FIR

Student Self Harming in PSI Collage

ಬೆಂಗಳೂರು: ಪರೀಕ್ಷೆಯಲ್ಲಿ ನಕಲು (Copy in the Exam) ಮಾಡುವಾಗ ಉಪನ್ಯಾಸಕರಿಗೆ ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಮರ್ಯಾದೆಗೆ ಅಂಜಿ ಕಾಲೇಜಿನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಕಾಲೇಜಿನ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

ಪ್ರತಿಷ್ಠಿತ ಕಾಲೇಜಿನ ವಿರುದ್ಧ 306 ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ (Abetment to Self Harming) ಆರೋಪದಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೋಮವಾರ ಮಧ್ಯಾಹ್ನ ಆದಿತ್ಯ ಪ್ರಭು (19) ಆತ್ಮಹತ್ಯೆ ಮಾಡಿಕೊಂಡಿದ್ದ.

ಪಿಇಎಸ್ ಕಾಲೇಜಿನಲ್ಲಿ ಬಿಇ ವಿದ್ಯಾಭ್ಯಾಸ ಮಾಡುತ್ತಿದ್ದ ಆದಿತ್ಯ ಪ್ರಭು, ಕನಕಪುರ ರಸ್ತೆ ಬಳಿಯ ಫ್ಲ್ಯಾಟ್‌ ಒಂದರಲ್ಲಿ ಪೋಷಕರೊಂದಿಗೆ ವಾಸವಾಗಿದ್ದ. ಆದಿತ್ಯ ಪ್ರಭುವಿನ ತಂದೆ – ತಾಯಿ ಇಬ್ಬರೂ ಎಂಜಿನಿಯರ್‌ ಆಗಿದ್ದು, ಮಗನನ್ನೂ ಎಂಜಿನಿಯರ್ ಮಾಡಬೇಕೆಂಬ ಆಸೆ ಹೊತ್ತಿದ್ದರು. ಅಷ್ಟರಲ್ಲಿ ಈ ಅವಘಡ ನಡೆದಿದೆ.

ಏನಿದು ಪ್ರಕರಣ?

ಸೋಮವಾರ ಎಂಜಿನಿಯರಿಂಗ್ ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್ ಪರೀಕ್ಷೆಯನ್ನು (Second Semester Exam) ಆದಿತ್ಯ ಪ್ರಭು ಬರೆಯುತ್ತಿದ್ದ. ಈ ವೇಳೆ ಆದಿತ್ಯ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದ. ಇದನ್ನು ಗಮನಿಸಿದ ಉಪನ್ಯಾಸಕಿಯೊಬ್ಬರು ಆದಿತ್ಯನಿಂದ ಮೊಬೈಲ್‌ ಕಿತ್ತುಕೊಂಡಿದ್ದರು. ಅಲ್ಲದೆ, ಪೇಪರ್‌ ಕಸಿದು ಆತನನ್ನು ಪಕ್ಕದ ಕೊಠಡಿಯಲ್ಲಿ ಒಬ್ಬನನ್ನೇ ಕೂರಿಸಲಾಗಿತ್ತು. ಬಳಿಕ ಆದಿತ್ಯನ ತಾಯಿಗೆ ಕರೆ ಮಾಡಿ ನಕಲು ವಿಷಯವನ್ನು ತಿಳಿಸಿದರು. ಜತೆಗೆ ಆದಿತ್ಯನಿಗೆ ಕೌನ್ಸೆಲಿಂಗ್‌ (Counselling to student) ಮಾಡಲು ಆಡಳಿತ ಮಂಡಳಿ ತಯಾರಿ ಮಾಡಿಕೊಂಡಿತ್ತು. ಆದರೆ ಅಷ್ಟರಲ್ಲಿ ಆತುರಕ್ಕೆ ಬಿದ್ದ ಆದಿತ್ಯ ಈ ವಿಚಾರ ಎಲ್ಲರಿಗೂ ತಿಳಿದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿದ್ದಾನೆ. ಇದರಿಂದ ಮನನೊಂದು ಕಾಲೇಜಿನ 14 ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Kichcha Sudeep : ರವಿಚಂದ್ರನ್‌ ಖಡಕ್‌ ವಾರ್ನಿಂಗ್;‌ ಧರಣಿಯಿಂದ ಎದ್ದೇಬಿಟ್ಟರು ಕುಮಾರ್!

ಆದರೆ, ಇಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಬೇಜವಾಬ್ದಾರಿಗೆ ವಿದ್ಯಾರ್ಥಿ ಬಲಿ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಈಗ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅನ್ವಯ ದೂರು ದಾಖಲಿಸಲಾಗಿದೆ.

Exit mobile version