ಮಂಗಳೂರು: ಹಿಜಾಬ್ ಧರಿಸುವಂತಿಲ್ಲ ಎಂದು ಪ್ರಾಂಶುಪಲರು ಸೂಚಿದ್ದರೂ ನಗರದ ಹಂಪನಕಟ್ಟೆ ವಿವಿ ಕಾಲೇಜಿಗೆ 12 ವಿದ್ಯಾರ್ಥಿನಿಯರು ಶನಿವಾರ ಹಿಜಾಬ್ ಧರಿಸಿ ಆಗಮಿಸಿದ್ದಾರೆ.
ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ. ಅನಸೂಯ ತಡೆದರು. ತರಗತಿಗಗೆ ಬರಬೇಡಿ ಎಂದು ಪ್ರವೇಶ ನಿರಾಕರಿಸಿದರು. ಬಳಿಕ ವಿದ್ಯಾರ್ಥಿನಿಯರು ಗ್ರಂಥಾಲಯದತ್ತ ತೆರಳಿದರು. ಅಲ್ಲಿಯೂ ಪ್ರಾಂಶುಪಾಲೆ ಬುದ್ಧಿ ಹೇಳಿ, ತರಗತಿಗೆ ಹೋಗಬೇಕಾದರೆ ಹಿಜಾಬ್ ತೆಗೆದು ಹೋಗಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲೂ ಹಿಜಾಬ್ ನೆರಳು: ಪಿಯುಗೆ ಸಮವಸ್ತ್ರ ಕಡ್ಡಾಯ
ಕೋರ್ಟ್ ಆದೇಶ ಪಾಲಿಸಬೇಕು
ಕೊಡಗು: ಹಿಜಾಬ್‌ವಿಚಾರದಲ್ಲಿ ಯಾರೂ ಕೋರ್ಟ್‌ಆದೇಶವನ್ನು ಉಲ್ಲಂಘನೆ ಮಾಡಬಾರದು. ಯಾವ ದೇಶದಲ್ಲಿ ಜೀವಿಸುತ್ತೇವೋ ಅಲ್ಲಿನ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು. ಮಂಗಳೂರು ಯುನಿವರ್ಸಿಟಿ ಕಾಲೇಜು ಹಿಜಾಬ್ ವಿವಾದದ ಬಗ್ಗೆ ಮಡಿಕೇರಿಯಲ್ಲಿ ಶನಿವಾರ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿಗೆ ಆದ್ಯತೆ ನೀಡಬೇಕು, ಹಿಜಾಬ್ ಬಿಟ್ಟು ಕೋರ್ಟ್ ಆದೇಶಕ್ಕೆ ವಿದ್ಯಾರ್ಥಿನಿಯರು ವಿಧೇಯರಾಗಿರಬೇಕು. ಈಗ ವಿದ್ಯೆಗೆ ಒತ್ತು ಕೊಡದಿದ್ರೆ ಮುಂದೆ ಅವರೆ ಆರ್ಥಿಕವಾಗಿ ಹಿಂದುಳಿಯುತ್ತಾರೆ ಎಂದು ಹೇಳಿದರು. ಕೆಲ ಸಂಘಟನೆಗಳ ಕುಮ್ಮಕ್ಕಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಬೇರೆಯವರ ಮಕ್ಕಳನ್ನ ಬಾವಿಗೆ ತಳ್ಳಿ ತಮಾಷೆ ನೋಡುವ ಕೆಲಸ ಇಲ್ಲಿ ನಡೆಯುತ್ತಿದೆ. ಪಿಎಫ್‌ಐ ಸೇರಿ, ಹಲವು ಸಂಘಟನೆಗಳ ಕೈವಾಡ ಇದರಲ್ಲಿ ಎದ್ದು ಕಾಣುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ಈ ವಿಚಾರವನ್ನು ಕೈ ಬಿಡಬಾರದು. ಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸುವ ಕೆಲಸ ಆಗಬೇಕು ಎಂದರು.
ನ್ಯಾಯಾಲಯದ ತೀರ್ಪು ಅಂತಿಮ
ಹಿಜಾಭ್ ವಿವಾದದ ಕುರಿತು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ವಿವಾದ ಮಾಡುವ ಪ್ರಶ್ನೆ ಇಲ್ಲ. ಎಲ್ಲರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು, ಬಹುತೇಕರು ಪಾಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಿಂಡಿಕೇಟ್ ನಿರ್ಧಾರ ಕೈಗೊಂಡಿದೆ, ಅದೇ ಅಂತಿಮ ಎಂದಿದ್ದಾರೆ.
ಇದನ್ನೂ ಓದಿ | Hijab Controversy | ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದದ ಕಿಡಿ