ಮೈಸೂರು: ಕೆ. ಆರ್.ಸಾಗರ (ಕೃಷ್ಣರಾಜ ಸಾಗರ)ದ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Students Drown). ಮೈಸೂರಿನ ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರವೀಣ್, ವರುಣ್, ಭರತ್ ಮೃತರು. ಇವರೆಲ್ಲ ಬಿಸಿಎ ಎರಡನೇ ವರ್ಷದಲ್ಲಿ ಓದುತ್ತಿದ್ದರು.
ಪ್ರವೀಣ್, ಭರತ್, ವರುಣ್ ಮತ್ತಿತರ ಸ್ನೇಹಿತರೆಲ್ಲ ಸೇರಿ ಪಿಕ್ನಿಕ್ಗೆಂದು ಮೀನಾಕ್ಷಿಪುರದಲ್ಲಿರುವ ಕೃಷ್ಣರಾಜಸಾಗರ ಹಿನ್ನೀರಿನ ಬಳಿ ತೆರಳಿದ್ದರು. ಪಡವಾರಳ್ಳಿ, ರಾಮಕೃಷ್ಣನಗರ, ಬಲ್ಲೇನಹಳ್ಳಿ ನಿವಾಸಿಗಳಾದ ಇವರು ಕೆಆರ್ಎಸ್ಗೆ ಹೋಗಿದ್ದಲ್ಲದೆ, ಅಲ್ಲಿ ಹಿನ್ನೀರಿನಲ್ಲಿ ಈಜಲು ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತ ಜಾಸ್ತಿ ಇದ್ದಿದ್ದರಿಂದ ಈಜಲು ಸಾಧ್ಯವಾಗದೆ, ಮುಳುಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಜೂನ್ನಲ್ಲಿ ಕೂಡ ಇದೇ ಜಾಗದಲ್ಲಿ ಇಬ್ಬರು ಎಂಜಿನಿಯರ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಕೆಆರ್ಎಸ್ ಹಿನ್ನೀರಿನಲ್ಲಿ ಈಜಲೆಂದು ಬಂದಿದ್ದ ಚಿರಂತ್ ಮತ್ತು ಸುನೀಲ್ ಎಂಬುವರು ಮುಳುಗಿ ಮೃತಪಟ್ಟಿದ್ದರು. ಇದರಲ್ಲಿ ಚಿರಂತ್ ಹಾಸನದವನಾಗಿದ್ದರೆ, ಸುನೀಲ್ ಬೀದರ್ನವನಾಗಿದ್ದ. ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಡುಗರು ಅಂದು ಅರ್ಧಗಂಟೆ ಚೆನ್ನಾಗಿಯೇ ಈಜಿದ್ದರು. ಆದರೆ ಒಮ್ಮೆಲೇ ಪ್ರವಾಹದ ಸೆಳೆತಕ್ಕೆ ಸಿಲುಕಿ, ಮುಳುಗಿದ್ದರು. ಕೂಡಲೇ ರಕ್ಷಣೆಗೆ ಮುಂದಾದರೂ, ಇಬ್ಬರೂ ಬದುಕಿರಲಿಲ್ಲ.