ತುಮಕೂರು: ಹರಿ ಮುನಿದರೆ ಗುರು ಕಾಯುವನು ಎಂಬ ಮಾತನ್ನು ಎಲ್ಲರು ಸಾಮಾನ್ಯವಾಗಿ ಕೇಳಿರುತ್ತೇವೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಅಷ್ಟು ಪವಿತ್ರ. ಇಲ್ಲಿನ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಕಳೆದ ೨೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರೊಬ್ಬರ ಬೀಳ್ಕೊಡುಗೆ ದಿನ (Farewell Ceremony) ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಾಲೆ ಬಿಟ್ಟು ಹೋಗದಂತೆ ಗೋಗರೆದಿದ್ದಾರೆ. ಆ ಶಿಕ್ಷಕನನ್ನು ತಮ್ಮ ಕಣ್ಣೀರಿನಲ್ಲೇ ಕಟ್ಟಿಹಾಕಿದ್ದಾರೆ.
ಡಾ.ಎಸ್.ಕೃಷ್ಣಪ್ಪ ಅವರು ಎಂಪ್ರೆಸ್ ಶಾಲೆಯಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಹಂಪಿ ವಿವಿಯಿಂದ ಪಿಎಚ್.ಡಿ ಪದವಿ ಪಡೆದಿದ್ದು, ಗುಬ್ಬಿ ತಾಲೂಕಿನಲ್ಲಿ ಅಂಕಸಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಪಡೆದುಕೊಂಡಿದ್ದರು. ಇವರ ಬೀಳ್ಕೊಡುಗೆ ಸಮಾರಂಭದ ದಿನ ವಿದ್ಯಾರ್ಥಿನಿಯರು ತಮ್ಮ ಗುರು ಡಾ.ಎಸ್.ಕೃಷ್ಣಪ್ಪ ಅವರು ಶಾಲೆ ಬಿಟ್ಟು ಹೋಗಬಾರದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆ ಸಹಿತ ಸುತ್ತಮುತ್ತಲಿನ ಹಳ್ಳಿಯಲ್ಲಿ ಗುರುತಿಸಿಕೊಂಡಿದ್ದ ಕೃಷ್ಣಪ್ಪ ಅವರು ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದ ಕನ್ನಡ ಶಿಕ್ಷಕರಾಗಿದ್ದರು.
ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಿಕ್ಷಕರನ್ನು “ಹೋಗಬೇಡಿ ಸರ್” ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ. ಶಾಲೆಯ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿದರು.
ಇದನ್ನೂ ಓದಿ| Viral Video: ಕೊಳಕು ನೀರು ಮೆಟ್ಟಲು ಒಪ್ಪದ ಶಿಕ್ಷಕಿಗೆ ಸೇತುವೆ ನಿರ್ಮಿಸಿಕೊಟ್ಟ ಮಕ್ಕಳು !