ರಾಯಚೂರು: ರಾಯಚೂರು ತಾಲೂಕಿನ ಕಲಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯ ಹಳೆ ಹೈಡಲ್ ಪ್ರಾಜೆಕ್ಟ್ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ನೀರಿಗೆ ಬಿದ್ದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.
ರಾಯಚೂರಿನ ಬೆಸ್ಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್ ಮತ್ತು ವೈಭವ ನಾಪತ್ತೆಯಾದವರು. ತುಂಗಭದ್ರಾ ಎಡದಂಡೆ ಕಾಲುವೆಗೆ ನಿರ್ಮಿಸಿದ್ದು ಈಗ ಮುಚ್ಚಿರುವ ಎನ್.ಆರ್. ಶೆಟ್ಟಿ ಹೈಡಲ್ ಪ್ರಾಜೆಕ್ಟ್ ಬಳಿ ದುರಂತ ನಡೆದಿದೆ. ಪಿಕ್ನಿಕ್ಗಾಗಿ ಇಲ್ಲಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಸೆಲ್ಫಿ ತೆಗೆಯುವ ವೇಳೆ ಕಾಲುವೆಗೆ ಬಿದ್ದಿದ್ದಾರೆ. ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ | Child theft rumour | ವಿಜಯನಗರ, ಧಾರವಾಡಕ್ಕೂ ಹಬ್ಬಿದ ಹಲ್ಲೆ ಹಾವಳಿ, ಇಬ್ಬರ ಮೇಲೆ ತೀವ್ರ ದಾಳಿ