Site icon Vistara News

Aryavardhan Guruji: ಆರ್ಯವರ್ಧನ್‌ ಗುರೂಜಿಗೆ ಸುದೀಪ್‌ ಫ್ಯಾನ್ಸ್‌ ಅಟ್ಯಾಕ್‌; ನೀನೊಬ್ಬ ಅನಾಗರಿಕ ಕಣೋ!

Sudeep fans attack on Aryavardhan Guruji

ಚಾಮರಾಜಪೇಟೆ: ಯಾವಾಗಲೂ ತಮ್ಮ ಹೇಳಿಕೆಯ ಮೂಲಕವೇ ಸದಾ ವಿವಾದದಲ್ಲಿರುವ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಆರ್ಯವರ್ಧನ್‌ ಗುರೂಜಿ (Aryavardhan Guruji) ಅವರು ಇದೀಗ ಬಿಗ್ ಬಾಸ್‌ ಬಗ್ಗೆ ಹಾಗೂ ಸುದೀಪ್‌ ಅವರ ಬಗ್ಗೆ ಹೇಳಿಕೆ ನೀಡಿ ಕಿಚ್ಚನ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಸ್ತಾರ ನ್ಯೂಸ್‌ನಲ್ಲಿ ಆರ್ಯವರ್ಧನ್‌ ಗುರೂಜಿ ಅವರು ಬಿಗ್‌ ಬಾಸ್‌ ಸೀಸನ್‌ 10ರ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಜತೆಗೆ ಕಿಚ್ಚ ಅವರ ಕುರಿತಾಗಿಯೂ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಇದೀಗ ಆರ್ಯವರ್ಧನ್‌ ಅವರ ಈ ಎಲ್ಲ ಹೇಳಿಕೆ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಮಾತ್ರವಲ್ಲ ಚಾಮರಾಜಪೇಟೆಯಲ್ಲಿರುವ ಆರ್ಯವರ್ಧನ್‌ ಗುರೂಜಿ ಅವರ ಕಚೇರಿಗೆ ಕಿಚ್ಚನ ಫ್ಯಾನ್ಸ್‌ ನುಗ್ಗಿದ್ದಾರೆ.

ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ನವೀನ್ ಗೌಡ ಹಾಗೂ ಬೆಂಬಲಿಗರು ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಗುರೂಜಿ ಅವರ ಕಚೇರಿಗೆ ನುಗ್ಗಿದ್ದಾರೆ. ಆರ್ಯವರ್ಧನ್ ಅವರಿಗೆ ʻʻಲೇವಡಿ ಮಾಡಿ ಯಾಕೆ ಮಾತಾಡ್ತಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದಾರೆ ನವೀನ್ ಗೌಡ. ಸುದೀಪ್ ಸರ್ ಬಗ್ಗೆ ಯಾಕೆ ಮಾತಾಡ್ತೀರಾ?ಬಿಗ್ ಬಾಸ್ ನಿಂದ ಸುದೀಪ್ ಅವರನ್ನ ಬದಲಾಯಿಸಬೇಕು ಎಂದು ಹೇಳಿದ್ದೀರಾ..?ಕಿಚ್ಚನ ಚಪ್ಪಾಳೆ ಯಾವನಿಗೆ ಬೇಕು..? ಎಂದು ಹೇಳಿದ್ದೀರಾ. ಹೀಗಾಗಿ ಸುದೀಪ್ ಸರ್ ಎದುರು ಬಂದು ಕ್ಷಮೆ ಕೇಳಿ ಎಂದು ಆರ್ಯವರ್ಧನ್‌ ಅವರಿಗೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಬಳಿಕ ಆರ್ಯವರ್ಧನ್‌ ಗುರೂಜಿ ಅವರನ್ನು ಬಿಗ್‌ ಬಾಸ್‌ ಸೆಟ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುದೀಪ್‌ ರೆಕಾರ್ಡಿಂಗ್‌ ನಡೆಯುತ್ತಿದೆ.

ಇದನ್ನೂ ಓದಿ: BBK Season 10: ಮತ್ತೆ ಹೆಚ್ಚಿದೆ ಬಿಗ್‌ ಬಾಸ್‌ ಟಿಆರ್‌ಪಿ; ಹಳೆಯ ರೆಕಾರ್ಡ್ ಎಲ್ಲ ಪುಡಿ ಪುಡಿ!

ಆರ್ಯವರ್ಧನ್‌ಗೆ ಹಿಗ್ಗಾಮಗ್ಗ ತರಾಟೆ ತೆಗೆದುಕೊಂಡ ಜಗದೀಶ್‌

ಬಿಗ್ ಬಾಸ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್ಯವರ್ಧನ್ ಗುರೂಜಿ ವಿರುದ್ಧ ಸುದೀಪ್ ಆಪ್ತ ಜಗದೀಶ್ ಎನ್ನುವವರು ವಾಗ್ದಾಳಿ ನಡೆಸಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಆರ್ಯವರ್ಧನ್‌ ಗುರೂಜಿ ಅವರು ವಿಡಿಯೊದಲ್ಲಿ ʻʻನನ್ನ ಪ್ರಕಾರ ಎರಡು ವರ್ಷದಲ್ಲಿ ನಿರೂಪಕನು ಚೇಂಜ್‌ ಆಗಬಹುದು. ಜ್ಯೋತಿಷ್ಯ ಯಾರಪ್ಪನ ಮನೆ ಸ್ವತ್ತಲ್ಲ. ನಾನು ಇರುವ ವಿಚಾರವನ್ನು ನೇರವಾಗಿ ಹೇಳ್ತೀನಿʼʼಎಂದರು.

ಈ ವಿಚಾರದ ಬಗ್ಗೆ ಜಗದೀಶ್‌ ಜಗ್ಗಿ ಅವರು ವಿಡಿಯೊ ಮೂಲಕ ʻʻಹಾದಿಯಲ್ಲಿ ಹೋಗುವರೆಲ್ಲ ಕಿಚ್ಚ ಅವರ ಬಗ್ಗೆ ಮಾತನಾಡುವ ಹಾಗೇ ಆಗಿದೆ. ಒಂದು ಆರ್ಯವರ್ಧನ್‌ ಕೂಡ. ಇತ್ತೀಚೆಗೆ ಕೆಟ್ಟದ್ದಾಗಿ ಬಿಗ್‌ ಬಾಸ್‌ ಕುರಿತು ಮಾತನಾಡಿದ್ದಾರೆ. ಈತ ಬಿಗ್‌ ಬಾಸ್‌ ಒಂದು ಫೇಕ್‌ ಗೇಮ್‌ ಎಂದು, ಕಿಚ್ಚ ಸುದೀಪ್‌ ಅವರಿಗೆ ಅವಮಾನ ಆಗುವ ರೀತಿ ಮಾತಾಡಿದ್ದಾರೆ. ಸುಮ್ಮ ಸುಮ್ಮನೇ ಕಿಚ್ಚ ನಗುತ್ತಾರೆ ಎಂದು ಹೇಳಿದ್ದಾರೆ. ಆರ್ಯವರ್ಧನ್‌ ನೀನೊಬ್ಬ ಅನಾಗರಿಕ ಎಂದು ಹೇಳಲು ಇಷ್ಟ ಪಡುತ್ತೇನೆ. ನಿನಗೆ ಜ್ಯೋತಿಷ್ಯ ಶಾಸ್ತ್ರ ಏನು ಎಂಬುದು ತಿಳಿದುಕೊಳ್ಳಿ. ನೀನೊಬ್ಬ ದೊಡ್ಡ ವೇಸ್ಟ್‌ ಬಾಡಿ. ಜನಗಳಿಗೆ ಹೇಳುವುದು ನೀನು ಸುಳ್ಳು. ಬಿಗ್‌ ಬಾಸ್‌ ಅನ್ನ ತಿಂದು ನಿರೂಪಕ, ಬಿಗ್‌ ಬಾಸ್‌ ಸರಿಯಿಲ್ಲ ಎಂದು ಹೇಳ್ತೀಯಾ. ಮಾತು ವಾಪಸ್ಸು ತೆಗೆದುಕೊಳ್ಳಬೇಕು. ಈ ಬಗ್ಗೆ ಕ್ಷಮೆ ಕೇಳಬೇಕು. ಕಿಚ್ಚನ ಚಪ್ಪಾಳೆ ಯಾರಿಗೆ ಬೇಕು ಎಂದಿದ್ದೀಯಾ. ಪ್ರಖ್ಯಾತ ನಟನ ಬಗ್ಗೆ ಈ ರೀತಿ ಮಾತನಾಡಿದ್ದೀಯಾ. ಎರಡೇ ದಿನ ನಿನಗೆ ಸಮಯ ಇರವುದು. ಕ್ಷಮೆ ಕೇಳಬೇಕು. ಮಾತಿನ ಮೇಲೆ ನಿಗಾ ಇರಲಿ ಎಂದುʼʼಖಡಕ್‌ ಆಗಿ ವಾರ್ನಿಂಗ್‌ ಮಾಡಿದ್ದಾರೆ.

Exit mobile version