ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಡಾ.ಸುಧಾಮೂರ್ತಿ (Sudha Murthy) ಹೆಸರು ಬಳಸಿ (Name Misuse) ವಂಚನೆ (Fraud Case) ಮಾಡಿದ ಆರೋಪಿಯನ್ನು ಜಯನಗರ ಪೊಲೀಸರು (Jayanagar Police) ಬಂಧಿಸಿದ್ದಾರೆ. ಅರುಣ ಸುದರ್ಶನ್ ಬಂಧಿತ ಆರೋಪಿಯಾಗಿದ್ದಾನೆ.
ಅಮೇರಿಕಾದಲ್ಲಿ ಮೀಟ್ ಆ್ಯಂಡ್ ಗ್ರೇಟ್ ವಿಥ್ ಡಾ. ಸುಧಾಮೂರ್ತಿ ಎಂಬ ಹೆಸರಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಮೇರಿಕಾದ ಸೇವಾ ಮಿಲ್ಪಿಟ್ಸ್ (sewa milpitas) ಎಂಬಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಸುಧಾಮೂರ್ತಿ ಅವರು ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಎಂದು ಸುಳ್ಳು ಹೇಳಿ 40 ಡಾಲರ್ ಪಡೆದು ಟಿಕೆಟ್ ಮಾರಾಟ ಮಾಡಲಾಗಿತ್ತು.
ಈ ಸಂಬಂಧ ಕಳೆದ ಸೆ. 24ರಂದು ಸುಧಾಮೂರ್ತಿಯವರ ಪರ್ಸನಲ್ ಅಸಿಸ್ಟೆಂಟ್ ಮಮತ ಸಂಜಯ್ ಅವರು ಶೃತಿ ಹಾಗೂ ಲಾವಣ್ಯ ಎಂಬುವವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐಟಿ ಆಕ್ಟ್ 66c ,66d ಹಾಗೂ ಐಪಿಸಿ 419 ,420 ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅರುಣ ಸುದರ್ಶನ್ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಈತನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Mandya News : ಕಿಟಕಿಗೆ ನೇತು ಹಾಕಿದ ಸ್ಥಿತಿಯಲ್ಲಿ ಗ್ರಾ.ಪಂ ಸದಸ್ಯನ ಶವ ಪತ್ತೆ!
ಬಂಧಿತ ಅರುಣ ಸುದರ್ಶನ್ ಎಂಬಾತ ಶೃತಿ ಅವರ ಪತಿಯ ಸಂಬಂಧಿಯಾಗಿದ್ದ. ಆದರೆ ಇವರ ಸಂಬಂಧ ಕಡಿದುಕೊಂಡಿದ್ದರು. ಶೃತಿ ಹಾಗೂ ಆಕೆಯ ಪತಿಯ ಮಾನ ಹರಾಜು ಹಾಕಬೇಕೆಂದು ಕಾದು ಕುಳಿತಿದ್ದ. ಈ ನಡುವೆ ಶೃತಿ ದಂಪತಿ ಅಮೆರಿಕಾದಲ್ಲಿ KKNC (Kannada koota of northen California) ದಿಂದ 50 ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದರೆ ಇ-ಮೇಲ್ ಮೂಲಕ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಎಂದು ಸುಧಾಮೂರ್ತಿಯವರು ಸಂದೇಶವನ್ನು ಕಳಿಸಿದ್ದರು.
ಹೀಗಾಗಿ ಶೃತಿ ದಂಪತಿ ಈ ಅರುಣ ಸಂದರ್ಶನ್‌ನನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಸುಧಾಮೂರ್ತಿಯರನ್ನು ಸಂಪರ್ಕಿಸಿ ಕರೆತರಲು ಕೋರಿದ್ದರು. ಇದಕ್ಕೆ ಆರೋಪಿ ಅರುಣ ಒಪ್ಪಿಗೆ ಸೂಚಿಸಿದ್ದ. ಈತನನ್ನು ನಂಬಿ ಈ ದಂಪತಿ ಭಾರಿ ಪ್ರಚಾರದೊಂದಿಗೆ ಸುಧಾಮೂರ್ತಿಯವರ ಫೋಟೊ ಬಳಸಿ ಜಾಹೀರಾತು ನೀಡಿದ್ದರು. ಕಾರ್ಯಕ್ರಮದ ಹೆಸರಲ್ಲಿ ಒಂದು ಟಿಕೆಟ್‌ಗೆ 40 ಡಾಲರ್ ಟಿಕೆಟ್ ಕೂಡ ಮಾರಾಟ ಮಾಡಿದ್ದರು. ಇದನ್ನೂ ಗಮನಿಸಿ ಮಮತಾ ಸಂಜಯ್ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ದೂರು ನೀಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ