ಸಿರುಗುಪ್ಪ(ಬಳ್ಳಾರಿ): ವಿದ್ಯುತ್ ಅವಘಡದಿಂದಾಗಿ (Electric fire) ಕಬ್ಬಿನ ಗದ್ದೆಗೆ ಬೆಂಕಿ ಆವರಿಸಿ ಸುಮಾರು ೪೭ ಎಕರೆ ಕಬ್ಬು ಸುಟ್ಟು ಹೋಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಉತ್ತನೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವ ಕೆಲಸ ಮಾಡಿದರು.
ಕಬ್ಬಿನ ಗದ್ದೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಟಾವಿನ ಹಂತಕ್ಕೆ ಬಂದ ಕಬ್ಬು ಹಸಿ ಇದ್ದರೂ, ಬೆಂಕಿಯ ಕೆನ್ನಾಲಿಗೆ ಸುಟ್ಟು ಹೋಗಿದೆ, ಸುಮಾರು ೧೦ ರೈತರಿಗೆ ಸೇರಿದ ಕಬ್ಬು ಅಗ್ನಿ ಜ್ವಾಲೆಗೆ ಬಲಿಯಾಗಿದೆ. ಒಂದು ವಾರದಲ್ಲಿಯೇ ಕಟಾವು ಹಂತಕ್ಕೆ ಬಂದಿತ್ತು ಎಂದು ಹೇಳಲಾಗುತ್ತಿದೆ.
ಎಕರೆಯೊಂದಕ್ಕೆ ೨೦ ಸಾವಿರ ರೂ.ಗಳನ್ನು ವ್ಯಯಿಸಿರುವ ರೈತರು ಘಟನೆಯಿಂದ ಕಂಗಾಲಾಗಿದ್ದಾರೆ. ಎಷ್ಟು ಪ್ರಮಾಣದ ಕಬ್ಬು ಬೆಂಕಿಗೆ ಸುಟ್ಟು ಹೋಗಿದೆ ಎಂಬುದು ಅಂದಾಜಿಸಬೇಕಾಗಿದೆ. ಇದ್ದಕ್ಕಿದ್ದಂತೆ ಬೆಂಕಿಯ ಜ್ವಾಲೆಗೆ ಕಬ್ಬು ಸುಟ್ಟು ಹೋಗುತ್ತಿದ್ದರೆ ರೈತರ ಕಂಗಾಲಾಗಿ ಹೋಗಿದ್ದರು. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ರೈತರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯ ಮಾಡಿದರು.
ಇದನ್ನೂ ಓದಿ | Cyclone Mandous | ಮಳೆಗೆ ಕೃಷಿಕರ ಬದುಕು ದುಸ್ತರ; ಬೆಳೆ ಹಾನಿ, ಮಾರುಕಟ್ಟೆಗಳು ಕೆಸರುಮಯ