Site icon Vistara News

Road Accident: ರಸ್ತೆ ಬದಿಯ ಶೆಡ್‌ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿ; ಮಹಿಳೆ ಸಾವು, ನಾಲ್ವರು ಗಂಭೀರ

sugarcane Tractor overturns on roadside shed Woman dies four critically injured

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ (Bailahongala) ತಾಲೂಕಿನ ಶೀಗಿಹಳ್ಳಿ ಗ್ರಾಮದ ಬಳಿ ಕಬ್ಬು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್‌ವೊಂದು ರಸ್ತೆ ಬದಿ ಇದ್ದ ಶೆಡ್‌ ಮೇಲೆ ಪಲ್ಟಿಯಾದ (Road Accident) ಪರಿಣಾಮ ಅದರೊಳಗೆ ವಾಸವಿದ್ದ ಒಬ್ಬರು ಮಹಿಳೆ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಶೀಗಿಹಳ್ಳಿ ಗ್ರಾಮದ ಬಳಿ ಟ್ರ್ಯಾಕ್ಟರ್‌ ಹೋಗುವಾಗ ಅಪಘಾತ ಸಂಭವಿಸಿದೆ. ಶೆಡ್‌ನಲ್ಲಿ ವಾಸವಿದ್ದ ಗಂಗಮ್ಮ ಕಂಬಾರ (56) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಅವರ ಜತೆಗಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದರ ಜತೆಗೆ ಶೆಡ್‌ನಲ್ಲಿ ಸಾಕಿದ್ದ ಒಂದು ಕುರಿ, ಎರಡು ಕೋಳಿಗಳು ಸಹ ಮೃತಪಟ್ಟಿವೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ಕಬ್ಬು ತುಂಬಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಶೀಗಿಹಳ್ಳಿ ರಸ್ತೆಯ ಬಳಿ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಶೆಡ್‌ ಮೇಲೆ ಬಿದ್ದಿದೆ.

ಇದನ್ನೂ ಓದಿ: Raft tragedy: ಕಡಬದ ಕುಮಾರಧಾರ ಹೊಳೆಯಲ್ಲಿ ತೆಪ್ಪ ಮಗುಚಿ ಮಹಿಳೆ ದಾರುಣ ಸಾವು; ಇನ್ನಿಬ್ಬರು ಪಾರು

ಈ ವೇಳೆ ಶೆಡ್‌ನಲ್ಲಿ ಇದ್ದ ಗಂಗಮ್ಮ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಅಲ್ಲದೆ, ಟ್ರ್ಯಾಕ್ಟರ್‌ ಬೀಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಓಡಿ ಬಂದಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾದರು. ಶೆಡ್‌ ಸಂಪೂರ್ಣ ನೆಲಸಮವಾಗಿತ್ತು. ಅಲ್ಲದೆ, ತಗಡಿನ ಮೇಲೆ ಕಬ್ಬಿನ ರಾಶಿ ಸಹ ಬಿದ್ದಿದ್ದರಿಂದ ಒಳಗೆ ಇದ್ದವರ ರಕ್ಷಣಾ ಕಾರ್ಯಕ್ಕೆ ಸಾಕಷ್ಟು ತೊಡಕಾಗಿತ್ತು. ತಕ್ಷಣವೇ ಕಬ್ಬನ್ನು ಪಕ್ಕಕ್ಕೆ ಹಾಕಿ ಒಳಗೆ ಗಾಯಗೊಂಡು ಬಿದ್ದವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version