ದೇವನಹಳ್ಳಿ: ಇಲ್ಲಿನ ದೇವನಹಳ್ಳಿ ಹೊರವಲಯದ ಒಜೋನ್ ಅರ್ಬನಾ ಅಪಾರ್ಟ್ಮೆಂಟ್ ಬಳಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Suicide Attempt) ಯತ್ನಿಸಿರುವ ಘಟನೆ ನಡೆದಿದೆ. ತುಮಕೂರು ಮೂಲದ ಸುಮಯಾ ಬಾನು ಆತ್ಮಹತ್ಯೆ ಯತ್ನಿಸಿದವರು.
ಸುಮಯಾ ಬಾನು ಎರಡು ವರ್ಷಗಳ ಹಿಂದೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಈ ವೇಳೆ ನ್ಯಾಯಾಲಯ ಮಗುವನ್ನು ತಾಯಿ ಸುಮಯಾ ಬಾನು ಸುಪರ್ದಿಗೆ ನೀಡಿತ್ತು. ಹೀಗಾಗಿ ಆಗಾಗ ಮಗುವನ್ನು ನೋಡಲು ಮೊದಲ ಪತಿ ಮೊಹಮ್ಮದ್ ಇಕ್ಬಾಲ್ ಮನೆಗೆ ಬಂದು ಹೋಗುತ್ತಿದ್ದ.
ಅದೇ ರೀತಿ ಕಳೆದ ತಿಂಗಳು ಮಗುವನ್ನು ನೋಡಲು ಬಂದವನು ಎತ್ತಿಕೊಂಡು ಹೋಗಿದ್ದ. ಇತ್ತ ನಾಪತ್ತೆಯಾದ ಮಗುವಿಗಾಗಿ ಸುಮಯಾ ಕಳೆದೊಂದು ತಿಂಗಳಿಂದ ಹುಡುಕಾಡುತ್ತಿದ್ದಳು. ಈ ವೇಳೆ ದೇವನಹಳ್ಳಿ ಬಳಿ ಮೊದಲ ಪತಿಯೊಂದಿಗೆ ಮಗು ಇರುವ ಬಗ್ಗೆ ಮಾಹಿತಿ ಪಡೆದು, ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ. ಆದರೆ, ಈ ವೇಳೆ ಮೊದಲ ಪತಿಯೊಂದಿಗೆ ಗಲಾಟೆ ನಡೆದಿದೆ.
ಇದನ್ನೂ ಓದಿ: Murder Case: ಸ್ನೇಹಿತನ ಕೊಲೆಗೆ ಟ್ರಿಪ್ ನೆಪ; ಬಲಗೈ ಬಂಟನಿಂದಲೇ ರೌಡಿಶೀಟರ್ ಹತ್ಯೆ
ಗಲಾಟೆಯಿಂದ ಮನನೊಂದು ಸುಮಯಾ ಬಾನು ಲೈವ್ ವಿಡಿಯೊ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ವತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರಿಂದ ದೂರು ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ