Site icon Vistara News

Suicide Case: ಪತಿಯಿಂದ ವರದಕ್ಷಿಣೆ ಕಿರುಕುಳ; ಡೆತ್‌ ನೋಟ್‌ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

dowry harassment by husband, Housewife commits suicide by writing suicide note

dowry harassment by husband, Housewife commits suicide by writing suicide note

ವಿಜಯನಗರ: ಗಂಡನಿಂದ ಮಾನಸಿಕ ಕಿರುಕುಳ, ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ರೂಪ ಅಲಿಯಾಸ್‌ ಬಸಮ್ಮ (33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮಗಳ ಆತ್ಮಹತ್ಯೆ ಸುದ್ದಿ ಕೇಳಿ ಕಂಗಾಲಾಗಿರುವ ರೂಪಳ ತಾಯಿ, ಅರ್ಜುನ್ ಪರಶೆಟ್ಟಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ. ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅರ್ಜುನ್ ಸೇರಿದಂತೆ 6 ಜನರ ಮೇಲೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿದೆ.

8 ತೊಲೆ ಬಂಗಾರ ವರದಕ್ಷಿಣೆ

2013ರಲ್ಲಿ ರೂಪಾಳ ಪೋಷಕರು ಅರ್ಜುನ್‌ ಪರಶೆಟ್ಟಿ ಕುಟುಂಬಕ್ಕೆ 8 ತೊಲೆ ಬಂಗಾರ ಹಾಗೂ ಎರಡು ಲಕ್ಷ ರೂ. ನಗದು ಜತೆಗೆ ಎಂಟು ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಸಿದ್ದರು. ಮದುವೆ ಆಗಿ 3 ತಿಂಗಳಿಗೆ ಅರ್ಜುನ ಪರಶೆಟ್ಟಿ ಹಾಗೂ ಆತನ ತಾಯಿ, ತಂಗಿ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೆ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡುತ್ತಿದ್ದರು. ನನ್ನ ಮಗಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದರು ಎಂದು ರೂಪಾಳ ತಾಯಿ ಆರೋಪಿಸಿದ್ದಾರೆ. ಇತ್ತೀಚೆಗೆ ರೂಪಾಳ ಪತಿ ಅರ್ಜುನ್‌ ಮನೆಗೆ ಬಂದು ಎರಡನೇ ಮದುವೆ ಆಗುವುದಾಗಿ ಹೇಳಿದ್ದನಂತೆ ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಮನನೊಂದ ರೂಪಾ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದು, ಬಳಿಕ ಡೆತ್‌ ನೋಟು ಬರೆದು ಶಾಲಾ ಕೊಠಡಿಯಲ್ಲಿ ವಿಷ ಕುಡಿದು ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಮಂಗಳೂರು ಸ್ಫೋಟಕ್ಕೆ ಸಾದಾ ಕುಕ್ಕರ್‌ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್‌ ಈಗ ಏನು ಹೇಳ್ತಾರೆ: ಸಿಎಂ ಬೊಮ್ಮಾಯಿ ಪ್ರಶ್ನೆ

ಡೆತ್‌ನೋಟ್‌ನಲ್ಲಿ ಏನಿದೆ?

ನನ್ನ ಪತಿ ನನ್ನ ಜತೆ ಜೀವನ‌ ಮಾಡುತ್ತಿಲ್ಲ. ನಾನು ನನ್ನ ಗಂಡನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಎಷ್ಟು ಪರಿಪರಿಯಾಗಿ ಕೇಳಿದರೂ ನನ್ನ ಜತೆ ಜೀವನ ಮಾಡಲಿಲ್ಲ. ಆತ್ಮಹತ್ಯೆ ಮಹಾಪಾಪ ಅನ್ನೋದು ನನಗೆ ಗೊತ್ತು, ಆದರೂ ಕೂಡ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version