ಚಿಕ್ಕಬಳ್ಳಾಪುರ: ಇಲ್ಲಿನ ನಾಗರಾರ್ಜುನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನೇಣಿಗೆ (Suicide Case) ಕೊರಳೊಡ್ಡಿದ್ದಾಳೆ. ಪ್ರೀತಿ (21) ಮೃತ ವಿದ್ಯಾರ್ಥಿನಿ.
ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ನಿವಾಸಿ ಸೂರ್ಯಪ್ರಕಾಶ್ ಅವರ ಮಗಳಾದ ಪ್ರೀತಿ, ನಾಗಾರ್ಜುನ ಕಾಲೇಜು ಹಾಸ್ಟೆಲ್ನಲ್ಲಿ ಇದ್ದಳು. ಹಾಸ್ಟೆಲ್ನಲ್ಲಿ ಇದ್ದಕೊಂಡೆ ಓದುತ್ತಿದ್ದ ಪ್ರೀತಿ ಇಂದು ಏಕಾಏಕಿ ತಾನಿರುವ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸದ್ಯ ಪೋಷಕರು ಮಗಳ ಆತ್ಮಹತ್ಯೆ ಕುರಿತು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ನಂದಿಗಿರಿಧಾಮ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ವರದಿ ಬಂದ ಬಳಿಕ ತನಿಖೆಯನ್ನು ಮುಂದುವರಿಸಲಿದ್ದಾರೆ.
ಇದನ್ನೂ ಓದಿ: Road Accident : ಹೈ ಸ್ಪೀಡ್ ಎಡವಟ್ಟು; ಬಸ್ಸಿನಡಿ ಸಿಲುಕಿದ ಸವಾರರು, ಬಸ್ಸನ್ನೇ ಪಲ್ಟಿ ಮಾಡಿ ರಕ್ಷಿಸಿದರು
ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಆಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಈ ಘಟನೆ ನಡೆದಿದೆ. ಭವ್ಯ ಮೃತಪಟ್ಟವರು. ಮನೆಯಲ್ಲಿಯೇ ಭವ್ಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಪ್ರಶಾಂತ್ ಆತ್ಮಹತ್ಯೆ ದೂರು ದಾಖಲಿಸಿದ್ದಾರೆ. ಆದರೆ ಮೃತಳ ಕುಟುಂಬಸ್ಥರು ಪ್ರಶಾಂತ್ನೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ