ಧಾರವಾಡ: ಯುವಕನೊಬ್ಬ ವಯಸ್ಸು 30 ದಾಟಿದರೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಸಶ್ಮಾನದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Suicide Case) ಯತ್ನಿಸಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂತೋಷ ಕೊರಡಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದಾತ.
ಈ ಹಿಂದೆ ಒಕ್ಕಲುತನ ಮಾಡುವ ರೈತರ ಮಕ್ಕಳಿಗೆ ವಧುಗಳು ಸಿಗದೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಎಷ್ಟೋ ಜನ ಗಂಡು ಮಕ್ಕಳಿಗೆ ವಯಸ್ಸು ಮೀರುತ್ತಿದೆ. ಹಲವರಿಗೆ ೩೫, ೪೦, ೪೫ ವರ್ಷಗಳಾದರೂ ಹೆಣ್ಣುಗಳೇ ಸಿಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆ ಎಂದು ಯುವಕರು ಕಷ್ಟವನ್ನು ತೊಡಿಕೊಂಡಿದ್ದ ಪತ್ರವೊಂದು ವೈರಲ್ ಆಗಿತ್ತು. ಜತೆಗೆ ವಧು-ವರರ ಅನ್ವೇಷಣೆಯಲ್ಲಿ ವಧು ಸಿಗುತ್ತಿಲ್ಲ ಎಂಬ ಸುದ್ದಿ ದೊಡ್ಡ ಚರ್ಚೆ ಆಗಿತ್ತು. ಈಗ ವಧು ಸಿಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಯುವಕನೊಬ್ಬ ಈ ಕೃತ್ಯ ಎಸಗಿದ್ದಾನೆ.
ಮದುವೆಗೆ ವಧು ಸಿಗಲಿಲ್ಲವೆಂದು ಖಿನ್ನತೆಗೆ ಒಳಗಾಗಿದ್ದ ಸಂಶೋಷ್, ಸ್ಮಶಾನದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದು, ನರಳಾಟ ಅನುಭವಿಸುತ್ತಿದ್ದಾನೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ | Tunisha Sharma Death | ಸಿಸಿಟಿವಿಯಲ್ಲಿ ಸೆರೆಯಾಯ್ತು ತುನಿಶಾ- ಶೀಜಾನ್ ತೀವ್ರ ವಾಗ್ವಾದ: ಕೇಸ್ ಮತ್ತಷ್ಟು ಗಂಭೀರ!