ಬೆಂಗಳೂರು: ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಾರ್ಲ್ಸ್ (18) ಮೃತ ದುರ್ದೈವಿ.
ಚಾರ್ಲ್ಸ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾರ್ಲ್ಸ್ ಆರು ತಿಂಗಳ ಹಿಂದೆ ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನನೊಂದಿದ್ದ. ಆದರೆ ಪೋಷಕರು ಧೈರ್ಯ ತುಂಬಿದ ಕಾರಣಕ್ಕೆ ಧೃತಿಗೆಡದೆ ನಂತರ ಮರು ಪರೀಕ್ಷೆಯನ್ನು ಬರೆದಿದ್ದ. ಅದರಲ್ಲೂ ಫೇಲ್ ಆಗಿದ್ದ. ಈ ವೇಳೆ ಕಾಲೇಜಿನವರು ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದಾರೆ.
ಮೊದಲ ಬಾರಿ ಫೇಲಾಗಿದ್ದ ಚಾರ್ಲ್ಸ್, ಎರಡನೇ ಬಾರಿಯೂ ಫೇಲಾಗಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ. ಬುಧವಾರ ರಾತ್ರಿ 9:30 ರ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದು, ಚಾರ್ಲ್ಸ್ ಮೃತದೇಹವನ್ನು ಸಿವಿ ರಾಮನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಮಗಳು ಪ್ರೀತಿಸಿ ಮದುವೆಯಾಗಿದ್ದರಿಂದ (Daugthers love marriage) ಮನಸ್ಸಿಗೆ ತೀವ್ರವಾದ ನೋವು ಅನುಭವಿಸಿದ ತಾಯಿಯೊಬ್ಬರು ತಾನೇ ಆತ್ಮಹತ್ಯೆಗೆ (Suicide case) ಶರಣಾಗಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುನೀತಾ ನಾಯಕವಾಡಿ (48) ಎಂಬವರೇ ಮಗಳ ಪ್ರೇಮ ಪಯಣವನ್ನು ಸಹಿಸಲಾಗದೆ ಪ್ರಾಣ ಕಳೆದುಕೊಂಡ (Mother suicide) ದುರ್ದೈವಿ.
ಸುನೀತಾ ನಾಯಕವಾಡಿ ಅವರು ಶಿರೋಳ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ (Anganawadi teacher) ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸುಷ್ಮಾ ಎಂಬ ಮಗಳಿದ್ದಾಳೆ. ಮಗಳನ್ನು ಚೆನ್ನಾಗಿ ಓದಿಸಿದ್ದ ಅವರು ಆಕೆಯಿಂದ ತಮ್ಮ ಬದುಕಿಗೆ ಗೌರವ, ನೆಮ್ಮದಿಯನ್ನು ಬಯಸಿದ್ದರು.
ಈ ನಡುವೆ, ಸುಷ್ಮಾ ಅದೇ ಗ್ರಾಮದ ಪರಯ್ಯ ಹಿರೇಮಠ ಎನ್ನುವ ಯುವಕನ ಜತೆ ಪ್ರೀತಿಯ ಪಯಣವನ್ನು ಆರಂಭಿಸಿದ್ದರು. ಇದಕ್ಕೆ ತಾಯಿಯ ಆಕ್ಷೇಪವಿತ್ತು. ಈ ನಡುವೆ ಸುಷ್ಮಾ ನಾಲ್ಕು ತಿಂಗಳ ಹಿಂದೆ ತಾಯಿಯ ವಿರೋಧವನ್ನೇ ಲೆಕ್ಕಿಸದೆ ಮದುವೆಯಾಗಿದ್ದಳು. ಮಾತ್ರವಲ್ಲ ಊರಿನಿಂದಲೇ ಓಡಿ ಹೋಗಿ ಬೆಂಗಳೂರಿನಲ್ಲಿ ವಾಸಿಸಲು ಶುರು ಮಾಡಿದ್ದಳು.
ಇದನ್ನೂ ಓದಿ: Pawan Kalyan: ಡಿವೋರ್ಸ್ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಟ್ಟ ಪವನ್ ಕಲ್ಯಾಣ್!
ಮಗಳನ್ನು ಪ್ರೀತಿಯಿಂದ ಬೆಳೆಸಿದರೂ ಹೀಗೆಲ್ಲ ಆಗಿ ಹೋಯಿತಲ್ಲ, ಪ್ರೀತಿಯ ಮುಂದೆ ನಾನೇ ಬೇಡವಾದೆನಲ್ಲ ಎನ್ನುವ ಬೇಸರದಿಂದ ಕಾಲ ಕಳೆಯುತ್ತಿದ್ದರು ಸುನೀತಾ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಬ್ಬಿಣದ ಪೈಪ್‌ಗೆ ಸೀರೆ ಕಟ್ಟಿ ಅದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ