ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ, ಬಜರಂಗದಳದ ಸಕ್ರಿಯ ಸದಸ್ಯನೊಬ್ಬ ಪ್ರೀತಿಸುವ ನಾಟಕವಾಗಿ, ವಂಚಿಸಿದ್ದಲ್ಲದೆ ಕಿರುಕುಳ ನೀಡುತ್ತಿದ್ದ ಎಂದು ಡೆತ್‌ನೋಟ್ ಬರೆದಿಟ್ಟು ಬಾಲಕಿಯೊಬ್ಬಳು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆರೋಪಿ ನಿತೇಶ್‌ನನ್ನು ಸಂಘಟನೆಯು ಹೊರದಬ್ಬಿದೆ.
17 ವರ್ಷದ ಕಾಲೇಜು ವಿದ್ಯಾರ್ಥಿನಿ ದೀಪ್ತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜ.14ರಂದು ಮೃತಪಟ್ಟಿದ್ದಳು. ಸಾವಿನ ಕೊನೆಯ ಕ್ಷಣದಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದ ಬಾಲಕಿ, ತನ್ನ ಸಾವಿಗೆ 25 ವರ್ಷದ ನಿತೇಶ್ ಕಾರಣ ಎಂದು ತಿಳಿಸಿದ್ದಾಳೆ. ನಿತೇಶ್ ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಬಜರಂಗದಳದಲ್ಲಿದ್ದ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.
ಈ ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಬಜರಂಗದಳವು, ಸಂಯೋಜಕ ಜವಾಬ್ದಾರಿಯಿಂದ ನಿತೇಶ್‌ನನ್ನು ಬಿಡುಗಡೆಗೊಳಿಸಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ನಿತೇಶ್‌ಗೂ ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ | Nitin Gadkari : ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಿಂಡಲಗಾದಲ್ಲಿ ಕೈದಿ ಜಯೇಶ್ ಪೂಜಾರಿ ವಶಕ್ಕೆ; ವಿಚಾರಣೆ ತೀವ್ರ
ಏನಿದು ಪ್ರಕರಣ?
ನಿತೇಶ್ 17 ವರ್ಷದ ದೀಪ್ತಿಯನ್ನು ಪ್ರೀತಿಸುವ ನಾಟಕವಾಗಿ, ವಂಚಿಸಿದ್ದ. ಅಲ್ಲದೆ, ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದೀಪ್ತಿ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಳು. ಈಕೆ ಜನವರಿ 10ರಂದು ಕಳೆ ನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 14ರಂದು ಮೃತಪಟ್ಟಿದ್ದಾಳೆ. ಸಾಯುವ ಕೊನೆಯ ಕ್ಷಣದಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಳು.
ಚಿಕ್ಕಮಗಳೂರು ಎಸ್‌ಪಿ ಗರಂ
ಡೆತ್‌ನೋಟ್‌ನಲ್ಲಿ ಹೆಸರಿಸಿದಂತೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ನಿತೇಶ್ ವಿರುದ್ಧ ದೂರು ದಾಖಲಿಸಲು ಕುದುರೆಮುಖ ಪೊಲೀಸರು ಸತಾಯಿಸುತ್ತಿದ್ದರು. ಹುಡುಗಿಯ ಪೋಷಕರು ನೀಡಿದ ದೂರನ್ನು ಸ್ವೀಕರಿಸದ ಕುದುರೆಮುಖ ಪೊಲೀಸರನ್ನು ಚಿಕ್ಕಮಗಳೂರು ಎಸ್‌ಪಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್‌ಪಿ ಸೂಚನೆ ಬಳಿಕ ನಿತೇಶ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ್ದಾರೆ.
ನಿತೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲು ಪೋಷಕರು ಒತ್ತಾಯಿಸಿದ್ದಾರೆ. ಆದರೆ, ಈವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಪೊಲೀಸರ ನಿರ್ಲಕ್ಷ್ಯಕ್ಕೆ ದೀಪ್ತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಬಿಜೆಪಿ ಕಾರ್ಯಕರ್ತ ನಿತೇಶ್ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು