ಶಿವಮೊಗ್ಗ: ಮದುವೆಯಾಗಿ ಒಂದೂವರೆ ವರ್ಷ ಕಳೆಯುವುದರೊಳಗೆ ವಿವಾಹಿತ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯೇ ಆಕೆಯ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಶಿರಾಳಕೊಪ್ಪದ ಕುರುಬರ ಕೇರಿಯಲ್ಲಿ ಈ ಪ್ರಕರಣ ನಡೆದಿದೆ. ಉಡುಗಣಿ ಗ್ರಾಮದ ಸಂಗೀತ (24) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಗಳ ಆತ್ಮಹತ್ಯೆಗೆ ಆಕೆಯ ಗಂಡ ಮತ್ತು ಆತನ ಮನೆಯವರೇ ಕಾರಣ ಎಂದು ಮಹಿಳೆ ತಂದೆ ಕೊಟ್ರಪ್ಪ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
2021 ಮೇ 20ರಂದು ನೇರಲಗಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಶಿರಾಳಕೊಪ್ಪದ ಕುರುಬರ ಕೇರಿಯ ಹರೀಶ್ ಎಂಬುವವನೊಂದಿಗೆ ಸಂಗೀತಾಳ ವಿವಾಹವನ್ನು ಮಾಡಿಕೊಡಲಾಗಿತ್ತು. ಈ ವೇಳೆ 40 ಗ್ರಾಂ ಚಿನ್ನ ಮತ್ತು 1.80 ಲಕ್ಷ ರೂ. ಮೌಲ್ಯದ ಪಾತ್ರೆ ಪಗಡೆಗಳನ್ನು ನೀಡಲಾಗಿತ್ತು ಎಂದು ಕೊಟ್ರಪ್ಪ ಹೇಳಿದ್ದಾರೆ.
ಡಿ.1 ರಂದು ಸಂಗೀತ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವರದಕ್ಷಿಣೆ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದುದೇ ಆಕೆಯ ಸಾವಿಗೆ ಕಾರಣ ಎಂದು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಹರೀಶ್, ಅತ್ತೆ ದುರ್ಗಮ್ಮ, ಮಾವ ಶಿವಲಿಂಗಪ್ಪ ಹಾಗೂ ಅದೇ ಮನೆ ಮಾಲ್ತೇಶ್ ಎಂಬುವವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅಳಿಯ ಹರೀಶ್ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ | Leopard attack | ಓಂಕಾರ ಹಿಲ್ಸ್ ಹಿಂಭಾಗದಲ್ಲಿರುವ ಜಾಗ ನಟ ರಕ್ಷಿತ್ ಶೆಟ್ಟಿಗೆ ಸೇರಿದ್ದು; ಚಿರತೆ ಸೆರೆ ಕಾರ್ಯಕ್ಕೆ ಚುರುಕು