Site icon Vistara News

Suicide Case | ನೇಣಿಗೆ ಶರಣಾದ ಗೃಹಿಣಿ; ಗಂಡನ ಅನೈತಿಕ ಸಂಬಂಧ, ಕಿರುಕುಳದ ಆರೋಪ

suicide case

ಚಿಕ್ಕಬಳ್ಳಾಪುರ: ಇಲ್ಲಿನ ಶಿಡ್ಲಘಟ್ಟ ತಾಲೂಕಿನ ಎಸ್ ಗುಂಡ್ಲುಹಳ್ಳಿ ಗ್ರಾಮದಲ್ಲಿ ಗೃಹಿಣೆಯೊಬ್ಬರು ಪತಿಯ ಅನೈತಿಕ ಸಂಬಂಧ ಹಾಗೂ ಆತನ ಕಿರುಕುಳಕ್ಕೆ ಬೇಸತ್ತು ನೇಣಿಗೆ (Suicide Case) ಶರಣಾಗಿದ್ದಾರೆ. ಮೋನಿಕಾ ಮೃತ ದುರ್ದೈವಿ.

ಮೃತ ಮೋನಿಕಾ ಹಾಗೂ ಪತಿ ಗುರುಮೂರ್ತಿ

ರಾಮಕೃಷ್ಣಪ್ಪ ಹಾಗೂ ಅನಸೂಯಮ್ಮ ದಂಪತಿಯ ಒಬ್ಬಳೇ ಮಗಳಾದ ಮೋನಿಕಾಳನ್ನು ಬಾಗೇಪಲ್ಲಿ ಪಟ್ಟಣದ ಸಂತೇ ಬೀದಿ ಬಡಾವಣೆಯ ಗುರುಮೂರ್ತಿ ಎಂಬಾತನೊಂದಿಗೆ ಕಳೆದ 13 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಇದಕ್ಕಾಗಿ ತಂದೆ, ತಾಯಿ 50 ಲಕ್ಷ ರೂಪಾಯಿ ಮೌಲ್ಯದ ಜಮೀನು ಮಾರಿ, ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು.

ಇದನ್ನೂ ಓದಿ | Dowry Case | ವರದಕ್ಷಿಣೆ, ಶೀಲ ಶಂಕಿಸಿ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದು ಹೂತು ಹಾಕಿದ ಪತಿ? ಹೆತ್ತವರ ದೂರು

ಆದರೆ, ಅಳಿಯ ಗುರುಮೂರ್ತಿ ಬೇರೊಬ್ಬ ಮಹಿಳೆಯ ಜತೆ ಅನೈತಿಕ ಸಂಬಂಧ ಹೊಂದಿದ್ದು, ತಮ್ಮ ಮಗಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದಲೇ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ಮೋನಿಕಾ ತಂದೆ ರಾಮಕೃಷ್ಣಪ್ಪ ಆರೋಪಿಸಿದ್ದಾರೆ. ಮೋನಿಕಾ ಹಾಗೂ ಗುರುಮೂರ್ತಿಗೆ ಮದುವೆಯಾಗಿ 13 ವರ್ಷಗಳು ಕಳೆದಿದ್ದು, 11 ವರ್ಷದ ವಿಷ್ಣುಪ್ರಿಯಾ ಎಂಬ ಮಗಳು ಇದ್ದಾಳೆ.

ಮೋನಿಕಾ ಆತ್ಮಹತ್ಯೆ ಸಂಬಂಧ ಬಾಗೇಪಲ್ಲಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ಎಂದು ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಗುರುಮೂರ್ತಿಗೆ ಸೇರಿದ್ದ ಮನೆ-ನಿವೇಶನ ಜಮೀನನ್ನು ಮೊಮ್ಮಗಳ ಹೆಸರಿಗೆ ನೋಂದಣಿ ಮಾಡಿಸಿ ಎಂದು ಕುಟುಂಬಸ್ಥರು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ | Dowry Case | ಹೇಮಾವತಿ ನಾಲೆಗೆ ಮಗುವಿನೊಂದಿಗೆ ಹಾರಿ ತಾಯಿ ಆತ್ಮಹತ್ಯೆ; ವರದಕ್ಷಿಣೆ ಕಿರುಕುಳಕ್ಕೆ ಬಲಿ ಶಂಕೆ

Exit mobile version