Site icon Vistara News

Suicide Case: ದಾಂಪತ್ಯ ಕಲಹದಿಂದ ಕೆರೆಗೆ ಹಾರಲು ಹೋದವಳನ್ನು ತಳ್ಳಿ ತಾನೂ ಬಿದ್ದ; ಪತ್ನಿ ಪಾರು, ಪತಿ ಸಾವು

#image_title

ಮಡಿಕೇರಿ: ಇಲ್ಲಿನ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹೊರೂರು ಗ್ರಾಮದಲ್ಲಿ ದಂಪತಿ ಆತ್ಮಹತ್ಯೆಗೆ (Suicide Case) ಯತ್ನಿಸಿದ್ದಾರೆ. ಘಟನೆಯಲ್ಲಿ ಪತಿ ಮೃತಪಟ್ಟರೆ, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಜು ಪೊನ್ನಪ್ಪರವರ ಎಂಬುವವರ ತೋಟದ ಕಾರ್ಮಿಕರಾಗಿರುವ ವಿಜಯ್ (32) ಮತ್ತು ಸೌಮ್ಯ (29) ದಂಪತಿ ನಡುವೆ ಭಾನುವಾರ (ಫೆ.13) ಮಧ್ಯಾಹ್ನ ಕಲಹ ಏರ್ಪಟ್ಟಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಸೌಮ್ಯ ಆತ್ಮಹತ್ಯೆ ಮಾಡಿಕೊಳ್ಳಲೆಂದು ತೋಟದ ಕೆರೆ ಬಳಿ ಬಂದಿದ್ದಾಳೆ.

ಅಲ್ಲಿಗೂ ಓಡಿ ಬಂದ ವಿಜಯ್ ಮತ್ತೆ ತಗಾದೆ ತೆಗೆದಿದ್ದಾನೆ. ಏನೇ ಆದರೂ ತಾನು ಜೀವಂತ ಇರುವುದಿಲ್ಲ ಎಂಬ ರೀತಿಯಲ್ಲಿ ಸೌಮ್ಯ ಸಹ ಜಗಳವಾಡಿದ್ದಾಳೆ ಎನ್ನಲಾಗಿದೆ. ಕೊನೆಗೆ ನೀನೇನು ಸಾಯುತ್ತೀಯಾ? ನಾನೇ ತಳ್ಳಿಬಿಡುತ್ತೇನೆ ಎಂದು ಪತ್ನಿಯನ್ನು ತಳ್ಳಿ ತಾನೂ ಕೆರೆಗೆ ಹಾರಿದ್ದಾನೆ.

ಇದನ್ನೂ ಓದಿ: Teacher suicide : ತಹಶೀಲ್ದಾರ್ ಕಚೇರಿ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ, ಡೆತ್‌ ನೋಟಲ್ಲಿ ಏನಿದೆ?

ಇದೇ ವೇಳೆ ಸ್ಥಳೀಯರು ಜಲಸಮಾಧಿ ಆಗಲಿದ್ದ ಸೌಮ್ಯಳನ್ನು ಸಕಾಲದಲ್ಲಿ ದಡಕ್ಕೆ ಸೇರಿಸಿ ಜೀವ ಉಳಿಸಿದ್ದಾರೆ. ಆದರೆ ವಿಜಯ್ ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದಾನೆ. ಸಂಜೆಯವರೆಗೆ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಈ ದಂಪತಿಗೆ 5 ತಿಂಗಳ ಮಗುವಿದ್ದು, ಇದೀಗ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version