ಬೆಂಗಳೂರು: ಇಲ್ಲಿನ ಯಶವಂತಪುರದಲ್ಲಿ ಐಟಿ ಇನ್‌ಸ್ಪೆಕ್ಟರ್ ರೈಲಿಗೆ ತಲೆ ಕೊಟ್ಟು ಅತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ನಡೆದಿದೆ. ದೇವೇಂದ್ರ ದುಬೆ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಆಗಿದ್ದಾರೆ.
ದೇವೇಂದ್ರ ಜನವರಿ 20ರಂದು ಪತ್ನಿ ಜತೆಗೆ ಗಲಾಟೆ ಮಾಡಿಕೊಂಡು ಹೋಗಿದ್ದರಂತೆ. ಬಳಿಕ ಪತ್ನಿಗೆ ತನ್ನ ಸಾವಿಗೆ ತಾನೆ ಕಾರಣ ಎಂದು ನೋಟ್ ಕಳಿಸಿದ್ದಾರಂತೆ. ಪತಿ ಸಂಪರ್ಕಕ್ಕೆ ಸಿಗದ ಕಾರಣ ಜ.23ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ನೀಡಲಾಗಿತ್ತು.
ಇದನ್ನೂ ಓದಿ: Terrorist arrested in Bangalore : ಮನೆ ಖಾಲಿ ಮಾಡಿ ಉ.ಪ್ರದೇಶಕ್ಕೆ ಹಾರಲು ರೆಡಿಯಾಗಿದ್ದ ಉಗ್ರನಿಗೆ ಶಾಕ್!
ಆದರೆ ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಯಾರೆಂದು ತಿಳಿದಿರಲಿಲ್ಲ. ತನಿಖೆ ವೇಳೆ ಐಟಿ ಅಧಿಕಾರಿ ಎಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.