ಕೊಪ್ಪಳ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಪತ್ರಕರ್ತರೊಬ್ಬರು ಆತ್ಮಹತ್ಯೆಗೆ (Suicide case) ಯತ್ನಿಸಿರುವ ಘಟನೆ ನಡೆದಿದೆ. ಬಂಡೆರಾವ್ ಮುಕ್ತೇದಾರ್ ಆತ್ಮಹತ್ಯೆಗೆ ಯತ್ನಿಸಿದ ಪತ್ರಕರ್ತ.
ಸಾಲಗಾರರ ವಿಪರೀತ ಕಿರುಕುಳ ತಳಲಾರದೆ ದಾಸನಾಳ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಂಡೆರಾವ್ ಮುಕ್ತೇದಾರ್ ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದರು. ಮೆಸೇಜ್ ಗಮನಿಸಿದ ತಕ್ಷಣವೇ ಸ್ಥಳೀಯ ಪತ್ರಕರ್ತರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಾನ್ಮುಖಗೊಂಡ ಪೊಲೀಸರು ಇಲ್ಲಿನ ಗಂಗಾವತಿ ತಾಲೂಕಿನ ದಾಸನಾಳ ಬ್ರಿಡ್ಜ್ ಬಳಿ ಹೋಗಿದ್ದಾರೆ. ಈ ವೇಳೆ ಕಾಲುವೆಯಲ್ಲಿ ಬಿದ್ದಿದ್ದ ಬಂಡೇರಾವ್‌ರನ್ನು ರಕ್ಷಿಸಲು ಮುಂದಾದ ಪೊಲೀಸ್ ವಾಹನ ಚಾಲಕ ನಿಂಗಪ್ಪ, ಕಾಲುವೆಗೆ ಜಿಗಿದು ರಕ್ಷಿಸಿದ್ದಾರೆ. ಪೊಲೀಸ್ ವಾಹನ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬಂಡೇರಾವ್ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ | Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ