Site icon Vistara News

Suicide Case | ಕುಟುಂಬ ಕಲಹಕ್ಕೆ ಬೇಸತ್ತು ರೈಲಿನಡಿ ಸಿಲುಕಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ಹೊಸೂರು: ತಮಿಳುನಾಡಿನ ಹೊಸೂರು ರೈಲ್ವೆ ಹಳಿ ಬಳಿ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆಗೆ (Suicide Case) ಯತ್ನಿಸಿರುವ ಘಟನೆ ನಡೆದಿದೆ. ಹೊಸೂರಿನ ಪಂಚರಾಜ್ಯಪುರ ಗ್ರಾಮದ ಮೋಗನ್ ಕುಟುಂಬ ಕಲಹದಿಂದ ಮನನೊಂದಿದ್ದರು.

ಹೀಗಾಗಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದು, ರೈಲು ಡಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡಿದ್ದರು. ರೈಲ್ವೆ ಬ್ರಿಡ್ಜ್‌ ಕಬ್ಬಿಣಕ್ಕೆ ಸಿಲುಕಿ ನರಳಾಡುತ್ತಿದ್ದವನನ್ನು ಸ್ಥಳೀಯರು ಹಾಗೂ ಪೊಲೀಸರು ಸೇರಿ ರಕ್ಷಣೆ ಮಾಡಿದರು.

ಗಂಭೀರ ಗಾಯಗೊಂಡಿದ್ದ ಮೋಗನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹೊಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Viral Video | ಅಯೋಧ್ಯಾ ಜೈಲಿಂದ ಬಿಡುಗಡೆಯಾದ 98ರ ವೃದ್ಧನಿಗೆ, ಸನ್ಮಾನಿಸಿ ಬಿಳ್ಕೊಟ್ಟ ಪೊಲೀಸ್​

Exit mobile version