Site icon Vistara News

Suicide case: ನೆರೆಮನೆಯ ಮಹಿಳೆ ಜತೆಗಿನ ಅಕ್ರಮ ಸಂಬಂಧ ಬಹಿರಂಗ; ಮರ್ಯಾದೆಗೆ ಅಂಜಿ ನೇಣು ಬಿಗಿದುಕೊಂಡ ವಿವಾಹಿತ

relationship

#image_title

ಪುತ್ತೂರು: ಅವನಿಗೆ ಪಕ್ಕದ ಮನೆಯ ವಿವಾಹಿತ ಮಹಿಳೆ ಜತೆಗೆ ಅಕ್ರಮ ಸಂಬಂಧ. ಆದರೆ, ತನ್ನ ನಿಜವಾದ ಹೆಂಡತಿ ಮಕ್ಕಳ ಜತೆ ಮಾತ್ರ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಜಗಳ! ಹೀಗಿರುತ್ತಾ ಒಂದು ದಿನ ಅಕ್ರಮ ಸಂಬಂಧ ಬಯಲಾಗಿದ್ದೇ ತಡ ಅವನು ಮರ್ಯಾದೆಗೆ ಅಂಜಿ ಪ್ರಾಣ (Suicide case) ಕಳೆದುಕೊಂಡಿದ್ದಾನೆ.

ಘಟನೆ ನಡೆದಿರುವುದು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ. ಆತ್ಮಹತ್ಯೆ ಮಾಡಿಕೊಂಡಿದ್ದು ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ (50) ಆತ್ಮಹತ್ಯೆ ಮಾಡಿಕೊಂಡವರು. ಏ.3ರಂದು ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಆತ್ಮಹತ್ಯೆಯ ಬಗ್ಗೆ ಶೀನಪ್ಪ ಅವರ ಪತ್ನಿ ಜಾನಕಿ ದೂರು ನೀಡಿದ್ದಾರೆ. ಅದರಲ್ಲಿ ಅವರು ನೆರೆಮನೆಯ ಮಹಿಳೆ ಜತೆಗಿದ್ದ ಪ್ರೇಮ ಸಂಬಂಧ, ಅದು ಬಯಲಾದದ್ದರ ಬಗ್ಗೆ ಹೇಳಿದ್ದಾರೆ. ಮೃತರ ಪತ್ನಿ ಜಾನಕಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರು ನೀಡಿದ ದೂರಿನ ಪ್ರಕಾರ, ಶೀನಪ್ಪನವರು ಏ.2ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ಮಧ್ಯಾಹ್ನ ಮದ್ಯ ಸೇವನೆ ಮಾಡಿ ಬಂದು ಪತ್ನಿ ಜೊತೆ ಜಗಳವಾಡಿದ್ದರು. ಬಳಿಕ ಮತ್ತೆ ಪೇಟೆ ಕಡೆ ಹೋಗಿ ಕುಡಿದು ಬಂದು ಪತ್ನಿ ಜಾನಕಿ ಮೇಲೆ ಹಲ್ಲೆ ನಡೆಸಿದ್ದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ್ದ ಮೂರು ಜನ ಮಕ್ಕಳು ತಂದೆ-ತಾಯಿ ನಡುವಿನ ಜಗಳವನ್ನು ತಡೆದಿದ್ದಾರೆ. ಈ ನಡುವೆ, ಈ ಜಗಳಕ್ಕೆ ಕಾರಣ ಪಕ್ಕದ ಮನೆಯ ಮಹಿಳೆ ಎಂದು ತಿಳಿದ ಜಾನಕಿ ತಮ್ಮ ಮಕ್ಕಳ ಜತೆಗೆ ಆಕೆಯ ಮನೆಗೆ ಹೋಗಿ ಜಗಳವಾಡಿದ್ದಾರೆ. ʻʻನನ್ನ ಗಂಡನ ಜೊತೆ ನಿನಗೇನು ಮಾತುʼʼ ಎಂದು ಜಾಡಿಸಿದ್ದಾಳೆ.

ಈ ನಡುವೆ, ಶೀನಪ್ಪ ಮತ್ತೆ ಪತ್ನಿ ಜಾನಕಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪಕ್ಕದ ಮನೆಯ ಮಹಿಳೆ ಶೀನಪ್ಪನನ್ನು ತಡೆದಿದ್ದಾಳೆ. ಬಳಿಕ ಅವರಿಬ್ಬರ ಸಂಬಂಧದ ಬಗ್ಗೆ ಆಗ ದೊಡ್ಡ ಮಟ್ಟದ ಚರ್ಚೆಯಾಗಿದೆ.

ಹೀಗೇ ಜಗಳ ತಾರಕಕ್ಕೆ ಏರಿದ ಬಳಿಕ ಶೀನಪ್ಪ ಸಿಟ್ಟಿನಿಂದ ಮನೆ ಬಿಟ್ಟು ಹೋಗಿದ್ದ. ರಾತ್ರಿ 8.30ರ ಸುಮಾರಿಗೆ ಮನೆಗೆ ವಾಪಾಸಾಗಿದ್ದ ಶೀನಪ್ಪ ಮೊಬೈಲ್ ಹಾಗೂ ಪರ್ಸ್ ಮನೆಯಲ್ಲೇ ಇಟ್ಟು ಮತ್ತೆ ಹೊರಟು ಹೋಗಿದ್ದ. ರಾತ್ರಿ ಹತ್ತು ಗಂಟೆಯಾದರೂ ಮನೆಗೆ ವಾಪಸಾಗದೇ ಇದ್ದುದರಿಂದ ಮನೆಯವರು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಪಕ್ಕದ ಮನೆಯ ಕೃಷ್ಣಪ್ಪ ಎಂಬವರ ತೋಟದ ಪಕ್ಕದ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶೀನಪ್ಪ ಮೃತ ದೇಹ ಪತ್ತೆಯಾಗಿದೆ. ಬಿದಿರಿನ ಏಣಿಯ ಸಹಾಯದಿಂದ ಮರ ಏರಿದ ಶೀನಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ನೆರೆಮನೆಯ ಮಹಿಳೆ ಜೊತೆಗಿನ ಪ್ರೇಮ ಸಂಬಂಧ ಬಹಿರಂಗವಾದ ಕಾರಣ ಶೀನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಜಾನಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆದಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಅಕ್ರಮ ಸಂಬಂಧವೇ ಅಥವಾ ಅಕ್ಕಪಕ್ಕದ ಮನೆಯವರ ಜಗಳವೇ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.

ಇದನ್ನೂ ಓದಿ : Murder case : ಅನೈತಿಕ ಸಂಬಂಧ ಪ್ರಶ್ನಿಸಿದ ಹೆಂಡತಿಯನ್ನು ಕೊಂದು ಪರಾರಿಯಾದ ಗಂಡ

Exit mobile version