ಶಿವಮೊಗ್ಗ/ವಿಜಯನಗರ: ದಿನೇ ದಿನೆ ಆತ್ಮಹತ್ಯೆಗೆ (Suicide Case) ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭದ್ರಾವತಿಯ ವೀರಾಪುರ ಕ್ರಾಸ್ ಬಳಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಿಳ್ಳೆನಹಳ್ಳಿ ನಿವಾಸಿ ನಂದೀಶ್ (35) ಎಂಬುವವರು ಮೃತ ದುರ್ದೈವಿ. ನಂದೀಶ್ ಕಳೆದ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೆಗ್ಗಾನ್ ಆಸ್ಪೆತ್ರೆಗೆ ಚಿಕಿತ್ಸೆಗಾಗಿ ಸ್ನೇಹಿತನ ಜತೆ ಬಂದಿದ್ದ ನಂದೀಶ್, ಚಿಕಿತ್ಸೆ ಪಡೆಯುವುದಿಲ್ಲ ಎಂದು ಹಠ ಮಾಡಿದ್ದಾರೆ. ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಾಪಸ್ ಬರುತ್ತಿದ್ದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬಸ್ಸಿನಿಂದ ಜಿಗಿದಿದ್ದಾರೆ. ಇತ್ತ ಚಾಲಕ ಬಸ್ ನಿಲ್ಲಿಸದೇ ತೆರಳಿದ್ದಾರೆ ಎನ್ನಲಾಗಿದ್ದು, ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ನಂದೀಶ್ ಮೃತದೇಹ ರವಾನೆ ಮಾಡಲಾಗಿದೆ.
ವಿಷ ಸೇವಿಸಿ ರೈತ ಆತ್ಮಹತ್ಯೆ
ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಲ ಬಾಧೆ ತಾಳಲಾರದೆ ಹಕ್ಕಂಡಿ ಗ್ರಾಮದ ರೈತ ಹಲಗಿ ರಾಮಪ್ಪ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 4 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದಾರೆ. ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಇದರಿಂದ ಮನನೊಂದಿದ್ದ ರೈತ ರಾಮಪ್ಪ, ಸಾಲ ಮರುಪಾವತಿ ಮಾಡಲಾಗದೆ ದುಡುಕಿನ ನಿರ್ಧಾರ ಮಾಡಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Harassment case | ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಕಿರುಕುಳ ಆರೋಪ; ವ್ಯಕ್ತಿ ಆತ್ಮಹತ್ಯೆ, ಕೊಲೆಯೆಂದ ಕುಟುಂಬ