Site icon Vistara News

Suicide Case | ಅಂತ್ಯಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕು; ಡೆತ್‌ ನೋಟ್ ಬರೆದು ಯುವಕ‌ ಆತ್ಮಹತ್ಯೆ

Suicide Case

ತುಮಕೂರು: ಶಾಸಕ ಗುಬ್ಬಿ ಶ್ರೀನಿವಾಸ್‌ ಅವರ ಅಪ್ಪಟ ಅಭಿಮಾನಿಯೊಬ್ಬ ಆತ್ಮಹತ್ಯೆಗೆ (Suicide Case) ಶರಣಾಗಿದ್ದು, ತನ್ನ ಅಂತ್ಯ ಸಂಸ್ಕಾರಕ್ಕೆ ಶಾಸಕರೇ ಬರಬೇಕೆಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಜಯಪ್ರಕಾಶ್‌ (39) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಗುಬ್ಬಿ ಪಟ್ಟಣದ ನಿವಾಸಿ ಜಯಪ್ರಕಾಶ್, ದಾಬಸ್‌ಪೇಟೆಯ ದೇವರಹೊಸಹಳ್ಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಹೆಸರಿಗೆ ಪಹಣಿ ಬರಲಿಲ್ಲ‌ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶಾಸಕ ಗುಬ್ಬಿ ಶ್ರೀನಿವಾಸ್‌, ಗೋಮಾಳ ಜಮೀನಿಗೆ ಸಾಗುವಳಿ ಚೀಟಿ‌ ನೀಡಲು ಸಹಾಯ ಮಾಡಿದ್ದರು. ನಂತರ ಅದನ್ನು ಆತನ‌ ಹೆಸರಿಗೆ ಪಹಣಿ ಬರುವಂತೆ ಮಾಡಿಸುವ ಭರವಸೆ ನೀಡಿದ್ದರು. ಪಹಣಿ ಮಾಡಿ ಕೊಡಲು ಅಧಿಕಾರಿಗಳು ಜಯಪ್ರಕಾಶ್‌ ಬಳಿ ಹಣ ತೆಗೆದುಕೊಂಡು ಕೆಲಸ‌ ಮಾಡಿ‌ಕೊಟ್ಟಿಲ್ಲವೆಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಜತೆಗೆ ಶಾಸಕ ಶ್ರೀನಿವಾಸ್ ನಮ್ಮ‌ ಕುಟುಂಬಕ್ಕೆ ಸಹಾಯ ಮಾಡಬೇಕು, ಜತೆಗೆ ನನ್ನ ಅಂತ್ಯ ಸಂಸ್ಕಾರಕ್ಕೆ ಬರಬೇಕೆಂದು ಪತ್ರದಲ್ಲಿ ಬರೆದಿದ್ದಾನೆ.

ಇದನ್ನೂ ಓದಿ | Knife Attack | ಪ್ರೀತಿಸಿದ ಯುವತಿಯ ಮನೆ ಮುಂದೆ ಗಲಾಟೆ; ಯುವಕನಿಗೆ ಚಾಕು ಇರಿತ

Exit mobile version