Site icon Vistara News

Suicide Case | ಮದುವೆ ಬ್ರೇಕಪ್‌ಗೆ ಬೇಸತ್ತು ಆರನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಇಲ್ಲಿನ ವಿವಿ ಪುರ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾಳೆ.

ಮೊದಲ ವರ್ಷದ ಎಲ್ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ ವಾಣಿ (23) ಎಂಬಾಕೆ ಮೃತ ದುರ್ದೈವಿ. ಸೋಮವಾರ ಕಾಲೇಜು ಕಟ್ಟಡದ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು. ಕಾಲೇಜು ಆಡಳಿತ ಮಂಡಳಿಯವರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರಾದರೂ ಫಲಿಸದೇ ಮೃತಪಟ್ಟಿದ್ದಾಳೆ.

ಆತ್ಮಹತ್ಯೆಗೂ ಮುನ್ನ ಎರಡು ಪುಟಗಳ ಡೆತ್‌ನೋಟ್ ಬರೆದಿಟ್ಟಿರುವ ವಾಣಿ, ಮದುವೆ ವಿಚಾರಕ್ಕೆ ಬೇಸತ್ತು ಹೋಗಿದ್ದಳು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿ ರದ್ದಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ | Devoleena Bhattacharjee | ಧರ್ಮದ ವಿಚಾರಕ್ಕೆ ಟ್ರೋಲ್‌ ಆದ ಕಿರುತೆರೆ ನಟಿ ದೇವೊಲೀನಾ ಭಟ್ಟಾಚಾರ್ಜಿ!

Exit mobile version