Site icon Vistara News

Self Harming : ಅಂಗಡಿ ಮುಂದೆ ನೇತಾಡುತ್ತಿತ್ತು ವ್ಯಕ್ತಿ ಶವ; ನೇಣಿಗೆ ಕೊರಳೊಡ್ಡಿದ ಬೆಸ್ಕಾಂ ಎಂಜಿನಿಯರ್‌

Bescom engineer commits suicide

ಬೆಂಗಳೂರು ಗ್ರಾಮಾಂತರ/ತುಮಕೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಸಮೀಪದ ಕನಸವಾಡಿ ಕ್ರಾಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ (Self Harming) ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನನ್ನು 8ನೇ ಮೈಲಿ ಸಮೀಪದ ಮಂಜುನಾಥನಗರ ನಿವಾಸಿ ರಾಜಣ್ಣ (45) ಎಂದು ಗುರುತಿಸಲಾಗಿದೆ.

ಅನುಮಾನಾಸ್ಪದವಾಗಿ ಅಂಗಡಿ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ರಾಜಣ್ಣ ಶವ ಪತ್ತೆ ಆಗಿದ್ದು, ಸ್ಥಳಕ್ಕೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದು ಆತ್ಮಹತ್ಯೆಯೊ ಅಥವಾ ಕೊಲೆಯೊ ಎಂಬ ಶಂಕೆ ವ್ಯಕ್ತವಾಗಿದೆ.

ಫ್ಯಾನಿಗೆ ನೇಣು ಬಿಗಿದುಕೊಂಡ ಬೆಸ್ಕಾಂ ಎಂಜಿನಿಯರ್‌

ತುಮಕೂರಿನ ಪಾವಗಡ ಪಟ್ಟಣದ ಲಾಡ್ಜ್‌ವೊಂದರಲ್ಲಿ‌‌‌ ಬೆಂಗಳೂರಿನ ಬೆಸ್ಕಾಂ ಎಂಜಿನಿಯರ್ ನೇಣಿಗೆ ಶರಣಾಗಿದ್ದಾರೆ. ಬೆಳ್ಳಂದೂರಿನ‌ ಬೆಸ್ಕಾಂ ಪೂರ್ವ ವಿಭಾಗದ ಜೂನಿಯರ್ ಇಂಜಿನಿಯರ್ ಮಂಜುನಾಥ್ (22) ನೇಣಿಗೆ ಶರಣಾದವರು.

ಇದನ್ನೂ ಓದಿ: Murder Case : ತೋಟದ ಮನೆಯಲ್ಲಿ ಪತ್ನಿಯ ಕೊಂದ; ಅಣ್ಣ-ತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯ

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪಾವಗಡ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಾವಗಡ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version