Site icon Vistara News

Suicide Case : ಬಸವನ ಬಾಗೇವಾಡಿಯಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ

Suicide Case

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ.

ರಾಕೇಶ್ ತಂದೆ ಅರ್ಜುನ ಅಂಗಡಿ (23) ಹಾಗೂ ಸಾವಿತ್ರಿ ಮಲ್ಲಪ್ಪ ‌ಅಂಬಲಿ (19) ಮೃತ ಪ್ರೇಮಿಗಳು. ಜೈನಾಪೂರ ಗ್ರಾಮದ ಹೊರವಲಯದ ತೊಟವೊಂದರಲ್ಲಿ ಗಿಡಕ್ಕೆ ನೇಣು ಹಾಕಿಕೊಂಡಿದ್ದಾರೆ. ಮಂಗಳವಾರ ರಾತ್ರಿ ರಾಕೇಶ್ ಮತ್ತು ಸಾವಿತ್ರಿ ಮನೆಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ.

ಇವರಿಗಾಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬುಧವಾರ ಗೊತ್ತಾಗಿದೆ. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Love Jihad | ನಾಲ್ಕು ಮಕ್ಕಳ ತಾಯಿಯನ್ನು ಮತಾಂತರ ಮಾಡಿ ಮದುವೆಯಾದ ಮುಸ್ಲಿಂ ವ್ಯಕ್ತಿ: ಕಣ್ಣೀರಲ್ಲಿ ಕುಟುಂಬ

Exit mobile version