ತುಮಕೂರು: ವೃತ್ತಿಯಲ್ಲಿ ಟೇಲರಿಂಗ್ ಮಾಡಿಕೊಂಡು ಉತ್ತಮವಾಗಿಯೇ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ಸಕ್ಕರೆ ಕಾಯಿಲೆ ಪ್ರಾರಂಭವಾಗಿ, ಅದರ ಪರಿಣಾಮ ತಾಳಲಾರದೆ ಆತ್ಮಹತ್ಯೆಗೆ (Suicide Case) ಶರಣಾದ ಘಟನೆ ಕೊರಟಗೆರೆ ಪಟ್ಟಣದ ಹನುಮಂತಪುರದಲ್ಲಿ ನಡೆದಿದೆ.
ಹನುಮಂತಪುರ ನಿವಾಸಿ ಮಹೇಶ್ (42) ಮೃತ ದುರ್ದೈವಿ. ಇವರು ಕಳೆದ 2 ವರ್ಷಗಳಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಗ್ಯಾಂಗ್ರಿನ್‌ನಿಂದ ಎರಡು ಕಾಲು ಬೆರಳುಗಳನ್ನು ಕಟ್ ಮಾಡಲಾಗಿತ್ತು.
ಸಕ್ಕರೆ ಕಾಯಿಲೆಯಿಂದ ಗಾಯಗಳು ವಾಸಿಯಾಗದ ಕಾರಣ ಹಾಗೂ ಗ್ಯಾಂಗ್ರಿನ್‌ನಿಂದ ಅಂಗಗಳನ್ನು ಕಳೆದುಕೊಳ್ಳುವ ಭಯಕ್ಕೆ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಶಾಪಿಂಗ್ ಕರೆದುಕೊಂಡು ಹೋಗದಿದ್ದಕ್ಕೆ ಮುನಿಸಿಕೊಂಡ ಬಾಲಕಿ ಆತ್ಮಹತ್ಯೆ