ಶಿವಮೊಗ್ಗ: ಸಾಗರದ ಕೋರ್ಟ್ ಮುಂಭಾಗದಲ್ಲಿ ಖಾಸಗಿ ಬೆರಳಚ್ಚುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೆರಳಚ್ಚುಗಾರರಾಗಿದ್ದ ನಿತ್ಯಾನಂದ ಅವರು ಕೆಳದಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲರ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಿವಿ ಕೇಳಿಸದ ವ್ಯಕ್ತಿ ಬದುಕಬಾರದು
ವಿಶ್ವನಾಥ ಅವರು ಭಾನುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾರೆ. ಸಾಗರ ಗ್ರಾಮಾಂತರ ಠಾಣೆ ಪಿಎಸ್ಐ ಗೆ ಬರೆದ ಪತ್ರದಲ್ಲಿ ಕೆಲವೊಂದು ಅಂಶಗಳನ್ನು ಬರೆದಿದ್ದು, ಅವರ ಸಾವಿಗೆ ಜೀವನದಲ್ಲಿ ಎದುರಾಗಿರುವ ಕೆಲವು ಘಟನೆಗಳೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಸೋಮವಾರ ಬೆಳಗ್ಗೆ ಕೆರೆಯ ಬಳಿ ಅವರ ಶವ ಪತ್ತೆಯಾಗಿದೆ.
ನಿತ್ಯಾನಂದ ಅವರು ಡೆತ್ ನೋಟ್ ಬರೆದಿಟ್ಟು ಬೈಕ್ ಏರಿ ನಾಪತ್ತೆಯಾಗಿದ್ದರು. ಅವರ ಬೈಕ್ ಮತ್ತು ಚಪ್ಪಲಿ ಕೆಳದಿ ಕೆರೆ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ತಿಳಿಸಲಾಯಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶವವನ್ನು ಕೆರೆಯಿಂದ ಮೇಲೆತ್ತಿದರು.
ʻʻಕಿವಿ ಕೇಳಿಸದೇ ಇರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಪ್ರಯೋಜನವಿಲ್ಲದ ವ್ಯಕ್ತಿಯಾಗಿ ಬದುಕಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಪಿಎಸ್‌ಐಗೆ ಬರೆದಿರುವ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ.
ಮೃತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ವಿಶ್ವನಾಥ ಅವರಿಗೆ ಹಿಂದಿನಿಂದಲೂ ಕಿವಿ ಕೇಳಿಸುತ್ತಿರಲಿಲ್ಲವೇ ಅಥವಾ ಇದು ಹೊಸ ಸಮಸ್ಯೆಯೇ ಎನ್ನುವುದು ಗೊತ್ತಾಗಿಲ್ಲ. ಅಂತೂ ಕೆಲವೊಂದು ಸಣ್ಣ ವಿಚಾರಗಳು ಹೇಗೆ ಬದುಕಿನಲ್ಲಿ ಅತಿರೇಕದ ಹೆಜ್ಜೆ ಇಡಲು ಕಾರಣವಾಗುತ್ತವೆ ಎನ್ನುವುದಕ್ಕೆ ಈ ಸಾವು ಒಂದು ನಿದರ್ಶನ.
ದಾಯಾದಿ ಕಲಹ ; ಕಾರು ನಿಲ್ಲಿಸುವ ಗಲಾಟೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ಕಾರು ನಿಲ್ಲಿಸುವ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ದಾಯಾದಿಗಳ ನಡುವಿನ ಹಿಂದಿನ ವೈಷಮ್ಯ ಸಣ್ಣ ಕಿಡಿಯಾಗಿ, ಬೂದಿ ಮುಚ್ಚಿದ ಕೆಂಡವಾಗಿದ್ದದ್ದು ಈಗ ರಕ್ತಪಾತಕ್ಕೆ ಕಾರಣವಾಗಿದೆ (Murder case) ಎಂದು ಹೇಳಲಾಗಿದೆ.
ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಇಸ್ಮಾಯಿಲ್ ಖಾನ್ ( 26 ) ಅವರನ್ನು ಕೊಂದು ಹಾಕಲಾಗಿದೆ. ಗ್ರಾಮದ ನಿವಾಸಿಗಳೇ ಆದ ಸೈಯದ್ ಹಿದಾಯತ್ ಶಾ, ಸೈಯದ್ ಅಜಿಮ್ ಶಾ, ಮತ್ತು ಸಯ್ಯದ್ ಅಖಿಲ್ ಶಾ ಅವರೇ ಚೂರಿಯಿಂದ ಇರಿದು ಕೊಲೆ ಮಾಡಿದವರು.
ಕೊಲೆಯಾದವರು ಮತ್ತು ಕೊಲೆ ಮಾಡಿದವರು ದಾಯಾದಿಗಳು. ಹಲವು ಸಮಯದಿಂದ ಇವರ ನಡುವೆ ಆಸ್ತಿ ವಿಚಾರ ಸೇರಿದಂತೆ ನಾನಾ ಕಾರಣಗಳಿಗಾಗಿ ಕಲಹ ನಡೆಯುತ್ತಲೇ ಇತ್ತು. ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಕಿರಿಕ್ ಶುರುವಾಗಿದೆ.
ಇಸ್ಮಾಯಿಲ್ ಖಾನ್ ಕಾರು ನಿಲ್ಲಿಸಲು ಹೋದಾಗ ಮಾತಿನ ಚಕಮಕಿ ಆರಂಭವಾಗಿ ಅದು ವಿಕೋಪಕ್ಕೆ ತಿರುಗಿತು. ಅಂತಿಮವಾಗಿ ಡ್ರಾಗರ್ ನಿಂದ ಹಲ್ಲೆ ಮಾಡಲಾಯಿತು. ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವು ಸಂಭವಿಸಿದೆ.
ಇಸ್ಮಾಯಿಲ್ ಸತ್ತು ಬೀಳುತ್ತಿದ್ದಂತೆಯೇ ಆತೋಪಿಗಳು ಎಸ್ಕೇಪ್ ಆಗಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ Accidental death : ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೆಂಗಿನ ಮರ ಉರುಳಿಬಿದ್ದು ರೈತ ಸಾವು